ಬೆನಕಟ್ಟಿ: ಗ್ರಾಮದ ಹೊರವಲಯದಲ್ಲಿರುವ ಮಲಪ್ರಭಾ ಎಡದಂಡೆ ಕಾಲುವೆಯಲ್ಲಿ ಭಾನುವಾರ ಗರಸ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಬದಾಮಿ ತಾಲೂಕಿನ ಅನವಾಲ ಗ್ರಾಮದ ಕೀರಪ್ಪ ಬೀರಪ್ಪ ಕಟಗಿ (24) ನೀರಿನಲ್ಲಿ ಮುಳಗಿ ಸಾವಿಗೀಡಾಗಿದ್ದಾರೆ. ಸಿದ್ದಪ್ಪ ಮೌಳಿ ಹಾಗೂ ಗಣಪತಿ ಮೌಳಿ ಎಂಬ ಇಬ್ಬರು ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಸೋಮವಾರ ಕಾಲುವೆ ನೀರು ಸ್ಥಗಿತಗೊಳಿಸಿ ಮತ ಯುವಕನ ದೇಹವನ್ನು ಹೊರತೆಗೆದು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ದೂರು ದಾಖಲಿಸಿಕೊಂಡಿರುವ ಕಟಕೋಳ ಠಾಣೆ ಪಿಎಸ್‌ಐ ಬಸವರಾಜ ಕೊಣ್ಣೂರ ತಿಳಿಸಿದ್ದಾರೆ.