ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸುನೀಲ ಶಿಂಧೆ ಅವರನ್ನು ಸುರೇಶ ಪಾಟೀಲ ಸನ್ಮಾನಿಸಿದರು. ಎಂ.ಎಸ್.ಕಾನಡೆ ಇದ್ದರು. 
ಬೆಳಗಾವಿ

ಆತ್ಮವಿಶ್ವಾಸ ಮತ್ತು ಸಹನೆಯಿಂದ ಕಷ್ಟ ಜಯಿಸಬಹುದು

ಮಾಂಜರಿ: ಸಮಾಜದ ಏಳಿಗೆ ಹಾಗೂ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಮಾಡಿ ಒಳ್ಳೆಯ ಹುದ್ದೆ ಪಡೆಯಬೇಕು ಎಂದು ಚಿಕ್ಕೋಡಿಯ ಕೆಎಲ್‌ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಎಂಸಿಎ ವಿಭಾಗ ಮುಖ್ಯಸ್ಥ ಡಾ.ಸುನೀಲ ಶಿಂಧೆ ಹೇಳಿದರು.
ಸಮೀಪದ ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕ್ರೀಡೆ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಚಾರ್ಯ ಎಂ.ಎಸ್.ಕಾನಡೆ ಮಾತನಾಡಿ, ಶಿಸ್ತು, ಆತ್ಮವಿಶ್ವಾಸ ಮತ್ತು ಸಹನೆಯಿಂದ ಕಷ್ಟ ಜಯಿಸಬಹುದು. ಹಾಗೆಯೇ ಶಿಕ್ಷಣವೆಂದರೆ ಕೇವಲ ಅಂಕ ಮತ್ತು ವಿಷಯಗಳಲ್ಲ, ನಿಜವಾದ ಶಿಕ್ಷಣ ಜವಾಬ್ದಾರಿ ಮತ್ತು ಮಾನವೀಯತೆ ಕಲಿಸುತ್ತದೆ ಎಂದರು.
ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಬಿಕಾಂ ತೃತೀಯ ವರ್ಷದ ಕವಿತಾ ಹಿಡಕಲ್ಲ ಪಡೆದುಕೊಂಡರು. ಅತ್ಯುತ್ತಮ ಸ್ವಯಂಸೇವಕ ಪುರಸ್ಕಾರವನ್ನು ನಾಗರಾಜ ಹೊಂಡಪ್ಪನವರ ಹಾಗೂ ಅತ್ಯುತ್ತಮ ಸೇವಾ ಸೇವಕಿ ಪುರಸ್ಕಾರವನ್ನು ಶ್ರೀದೇವಿ ಆಲಾಜ ಪಡೆದುಕೊಂಡರು.
ಕ್ರೀಡಾ ವಿಭಾಗದಲ್ಲಿ ಜನರಲ್ ಚಾಂಪಿಯನ್ನಾಗಿ ಓಂಕಾರ ಸಾಳುಂಕೆ ಮತ್ತು ನಿಖಿಲ ಕೋಳಿ, ಸುಶ್ಮಿತಾ ಪಿರಾಜೆ ಅವರು ಪಡೆದುಕೊಂಡಿದ್ದಾರೆ.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಸುರೇಶ ಪಾಟೀಲ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಆರ್.ಉಮರಾಣಿ, ವೈ.ಬಿ.ಮಾಚಕನೂರ, ಸಂಸ್ಕೃತಿ ಶಾಲೆ ಮುಖ್ಯಸ್ಥ ಮಾಹುವಾ, ಶ್ರೀಮತಿ ಶಾರದಾ ದೇವಿ ಕೋರೆ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪಿ.ಎನ್.ತಳವಾರ, ಶಾರದಾ ಕೋರೆ ಪ್ರೌಢಶಾಲೆ ಮುಖ್ಯಸ್ಥೆ ಜೆ.ಎಸ್.ತಮಗೊಂಡ ಇತರರಿದ್ದರು. ಪ್ರೊ.ಆರ್.ಎ.ಕೆರಗುಟೆ ಸ್ವಾಗತಿಸಿದರು. ಪ್ರೊ.ಪಿ.ಎ.ಕಾಟೆ ವಂದಿಸಿದರು. ಪ್ರೊ.ಎಸ್.ಬಿ.ಬೊಮ್ಮನ್ನವರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಎಲ್.ಆರ್.ಮೇತ್ರಿ ವರದಿ ಓದಿದರು. ಪ್ರೊ.ಬಿ.ಎ.ವಾಗ್ಮರೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನೆರವೇರಿಸಿದರು.