ಒತ್ತಡ ನಿರ್ವಹಣಾ ಶಿಬಿರದಲ್ಲಿ ಡಾ.ಚಂದ್ರಶೇಖರ ಹಳಿಂಗಳಿ ಅವರನ್ನು ಸನ್ಮಾನಿಸಲಾಯಿತು. ಡಾ.ಸತೀಶ ಮುಗ್ಗನ್ನವರ, ಡಾ.ಮುರಾರಿ ಬನಾಜ, ಡಾ.ಸಂಜಯ ಪೂಜಾರ ಇತರರಿದ್ದರು.
- ಮನೋವೈದ್ಯ ಡಾ.ಚಂದ್ರಶೇಖರ ಹಳಿಂಗಳೆ ಅಭಿಪ್ರಾಯ
- ಒತ್ತಡ ನಿರ್ವಹಣೆ ಶಿಬಿರ
ಕಾಗವಾಡ: ರೋಗಿಗಳ ಸೇವೆಯಲ್ಲಿ ನಿರತರಾಗಿರುವ ವೈದ್ಯರು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರುತ್ತಾರೆ. ಒತ್ತಡ ನಿರ್ವಹಣೆ ಕೇವಲ ವೈಯಕ್ತಿಕ ಅಗತ್ಯವಲ್ಲ. ಬದಲಾಗಿ ಉತ್ತಮ ಆರೋಗ್ಯ ಸೇವೆ ನೀಡಲು ಪೂರಕ ಎಂದು ಮಿರಜ್ ಪಟ್ಟಣದ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ಮನೋವೈದ್ಯ ಡಾ.ಚಂದ್ರಶೇಖರ ಹಳಿಂಗಳಿ ಹೇಳಿದರು.
ಅಥಣಿ ಪಟ್ಟಣದ ಸಾಹುಕಾರ ಸಭಾಭವನದಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಮಿರಜ್‌ನ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರದ ಆಶ್ರಯದಲ್ಲಿ ವೈದ್ಯರಲ್ಲಿ ಒತ್ತಡ ನಿರ್ವಹಣೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ಶಿಬಿರದಲ್ಲ್ಲಿ ಮಾತನಾಡಿ, ವೈದ್ಯಕಿಯ ವೃತ್ತಿಯಲ್ಲಿ ತುರ್ತು ಪರಿಸ್ಥಿತಿ, ವೃತ್ತಿಪರ ಜವಾಬ್ದಾರಿಗಳಿಂದ ವೈದ್ಯರಲ್ಲಿ ಒತ್ತಡ ಹೆಚ್ಚುತ್ತಿದೆ. ಇದನ್ನು ನಿವಾರಿಸಲು ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಸಕಾರಾತ್ಮಕ ಚಿಂತನೆ, ಸಮಯದ ಸಮರ್ಪಕ ನಿರ್ವಹಣೆ, ಸಮತೋಲಿತ ಜೀವನಶೈಲಿ ಅಗತ್ಯ ಎಂದರು.
ಆಯುಷ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಡಾ.ಸತೀಶ ಮುಗ್ಗನ್ನವರ, ಉಪಾಧ್ಯಕ್ಷ ಡಾ.ಮುರಾರಿ ಬನಾಜ, ಕಾರ್ಯದರ್ಶಿ ಡಾ.ಸಂಜಯ ಪೂಜಾರ ಇತರರಿದ್ದರು.