ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಜರುಗಿತು.
ಹಿರೇಬಾಗೇವಾಡಿ: ಇಲ್ಲಿನ ಗಾಂಧಿನಗರದಲ್ಲಿ ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜಂಭಣೆಯಿಂದ ಜರುಗಿತು.
ಬೆಳಗ್ಗೆ ದೇವಿಗೆ ರುದ್ರಾಭಿಷೇಕ, ಸ್ವಸ್ತಿ ನಾಂಜನ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ನವಗ್ರಹ ಪೂಜೆ, ಹೋಮ ನೆರವೇರಿತು. ಕಾರ್ಯಕ್ರಮದಲ್ಲಿ ಸುರೇಶ ತಳವಾರ, ಅಡಿವೇಶ ಇಟಗಿ, ಸ್ವಾತಿ ಇಟಗಿ, ದಯಾನಂದ ಹುಲಮನಿ, ಬಸಯ್ಯ ಯಾದವಾಡಮಠ, ಗ್ರಾಮದ ಮಹಿಳೆಯರು, ಗಣ್ಯರು ಭಾಗಿಯಾಗಿದ್ದರು. ಗಣ್ಯರನ್ನು ಸನ್ಮಾನಿಸಲಾಯಿತು.
ಈರಯ್ಯ ಸ್ವಾಮಿ ಉದೇಶಿಮಠ ಪೂಜಾ ವಿಧಿಗಳನ್ನು ನೆರವೇರಿಸಿದರು. ಕಾರ್ಯಕ್ರಮದ ನಂತರ ಅನ್ನಪ್ರಸಾದ ಜರುಗಿತು.