ಯಲ್ಲಾಲಿಂಗ ಮಹಾಪ್ರಭುಗಳ 141ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಡಾ.ಮುರುಘರಾಜೇಂದ್ರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸದಾಶಿವ ದೇಸಿಂಗೆ ಇತರರಿದ್ದರು.
ಮುಗಳಖೋಡ: ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾದ ಮುಗಳಖೋಡದ ಮುಕ್ತಿ ಮಂದಿರ ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಲಿಂ.ಯಲ್ಲಾಲಿಂಗ ಮಹಾಪ್ರಭುಗಳ ಮಹಿಮೆ ಅಪಾರ ಎಂದು ಬಿಜೆಪಿ ಮುಖಂಡ ಸದಾಶಿವ ದೇಸಿಂಗೆ ಹೇಳಿದರು.
ಬೃಹನ್ಮಠದಲ್ಲಿ ಯಲ್ಲಾಲಿಂಗ ಮಹಾಪ್ರಭುಗಳ 141ನೇ ಜಯಂತ್ಯುತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಸಾಧನೆ ಹಿಂದೆ ಯಲ್ಲಾಲಿಂಗ ಅಜ್ಜನವರ ಅನುಗ್ರಹವಿದೆ. ಡಾ.ಮುರುಘರಾಜೇಂದ್ರ ಸ್ವಾಮೀಜಿ ಸಮಾಜವನ್ನು ಜಾತಿ-ಮತ ಭೇದವಿಲ್ಲದೆ ಸಮಾನ ದೃಷ್ಟಿಯಿಂದ ಮುನ್ನಡೆಸಿದ ಕಾರ್ಯ ಅಣುಕರಣೀಯ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ರೈತ ಸಮಾವೇಶ ನಡೆಯಿಸಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿರುವ ಕಾರ್ಯ ಮಾದರಿ ಎಂದರು.
ಕೇಕ್ ಕತ್ತರಿಸುವ ಮೂಲಕ ಜಯಂತಿ ಆಚರಿಸಲಾಯಿತು. ಹಳಿಂಗಳಿ ಶಿವಾನಂದ ಸ್ವಾಮೀಜಿ, ರಬಕವಿ ಪ್ರಭುದೇವರು, ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ಎ.ಟಿ.ಪಾಟೀಲ, ಎಂ.ಎಸ್.ಗೋಕಾಕ, ವಕೀಲ
ಎಲ್.ಬಿ.ಚೌಗಲಾ, ಲಚ್ಯಾಣದ ಪಿ.ಎ.ಮುಜಗೊಂಡ, ಡಿ.ಎಸ್.ಪಾಟೀಲ, ಪುರಸಭೆ ಸದಸ್ಯರಾದ ಪರಪ್ಪಗೌಡ ಖೇತಗೌಡ, ಚೇತನ ಯಡವನ್ನವರ, ಹಾಲಪ್ಪ ಶೇಗುಣಸಿ, ಮಹಾಂತೇಶ ಯರಡೆತ್ತಿ, ರಾಜು ನಾಯಿಕ, ಡಾ.ಗಿರೀಶ ನಾರಗೊಂಡ, ಲಕ್ಕಪ್ಪ ಸವಸುದ್ದಿ, ಕೃಷ್ಣಾ ಕೋಟೆವಾಲೆ ಇತರರಿದ್ದರು.
"
ಯಲ್ಲಾಲಿಂಗ ಮಹಾಪ್ರಭುಗಳು ಪವಾಡ ಮಾಡಿ ಭಕ್ತರ ಕಷ್ಟ-ಕಾರ್ಪಣ್ಯ ದೂರ ಮಾಡಿದ್ದಾರೆ. ಅಂಥವರ ಜಯಂತ್ಯುತ್ಸವ ಆಚರಿಸಲು ಬಂದ ಭಕ್ತರ ಜೀವನ ಪಾವನವಾಗಲಿದೆ. ರೈತರು ಸಂತೋಷದಿಂದ ಜೀವನ ಕಳೆಯುವ ಕಾಲ ಬರಲಿದೆ. ರೈತರು ಬೆಳೆದ ಬೆಳೆಗೆ ಉತ್ತಮ ದರ ಲಭಿಸಲಿದ್ದು, ತಾಳ್ಮೆಯಿಂದ ಇರಬೇಕು.
— ಡಾ.ಮುರುಘರಾಜೇಂದ್ರ ಸ್ವಾಮೀಜಿ ಶ್ರೀಮಠದ ಪೀಠಾಧಿಪತಿ