Wrestling tournament in Yellur
ಬೆಳಗಾವಿ: ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಕಲ್ಮೇಶ್ವರ, ಚಾಂಗಳೇಶ್ವರಿ ಮತ್ತು ಮಹಾಲಕ್ಷಿ$್ಮ ದೇವಿ ಜಾತ್ರೆಯ ಪ್ರಯುಕ್ತ ಏ.16ರಂದು ಮಧ್ಯಾಹ್ನ 2ರಿಂದ "ಲೋಕಮಾನ್ಯ ಕೇಸರಿ" ಶೀರ್ಷಿಕೆಯಡಿ ಕುಸ್ತಿ ಪದ್ಯಾವಳಿ ಆಯೋಜಿಸಲಾಗಿದೆ.
ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷಿ$್ಮ ಹೆಬ್ಬಾಳ್ಕರ್, ಲೋಕಮಾನ್ಯ ವಿವಿಧೋದ್ದೇಶ ಸೊಸೈಟಿ ಸಂಸ್ಥಾಪಕ ಕಿರಣ ಠಾಕೂರ, ಕಾಂಗ್ರೆಸ್ ಯುವಕ ಮುಖಂಡ ಮೃಣಾಲ ಹೆಬ್ಬಾಳ್ಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ ಇತರರು ಪಾಲ್ಗೊಳ್ಳುವರು.
ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನ್ ಮಿರ್ಜಾ ಇರಾನ್ ವಿರುದ್ಧ ಭಾರತ ಕೇಸರಿ ಸಾಹಿಲ್ ಕೊಲಿ, ಹರ್ಷವರ್ಧನ ಸದಗೀರ&ನಿರು ಗುರ್ಜರ, ಪೃಥ್ವಿರಾಜ ಪಾಟೀಲ&ಮುಸಾ ಪಂಜಾಬ, ರಾಹುಲ ಸುಳ&ರಾು ಟೊಂಬರೆ, ಸುಬೋಧ ಪಾಟೀಲ ವಿರುದ್ಧ ಹಿತು ಠಾಕೂರ ಸೇರಿದಂತೆ ಒಟ್ಟು 88 ಜೋಡಿ ಪೈಲ್ವಾನರು ಸೆಣಸಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.