ಬೆಳಗಾವಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಅಭಿಪ್ರೇರಣಾ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಅಖಿಲಕುಮಾರ ಹಲಗತ್ತಿ, ಆಂಜನೇಯ ರ್.ಕೆ., ಪ್ರವೀಣ ಪಾಟೀಲ, ಭುವನ ಹಿರೇಮಠ, ಶಿವಶಂಕರ ಹಿರೇಮಠ ಇತರರಿದ್ದರು.
ಬೆಳಗಾವಿ: ಪ್ರೇರಣಾದಾಯಕವಾದ ಕಾರ್ಯಾಗಾರಗಳು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅವಶ್ಯ ಎಂದು ಡಿಡಿಪಿಐ ಲೀಲಾವತಿ ಹಿರೇಮಠ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಗುರುದೇವ ಜಂಬಗಿ ವಿಜ್ಞಾ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರಿ -625 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿಪ್ರೇರಣಾ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿ, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಭಯಪಡುವ ಅಗತ್ಯವಿಲ್ಲ. ಸತತ ಅಧ್ಯಯನದಿಂದ ಉತ್ತಮ ಅಂಕಗಳಿಸಬಹುದು ಎಂದರು.
ಬಿಇಒ ಆಂಜನೇಯ ಆರ್.ಕೆ. ಮಾತನಾಡಿ, ವಿದ್ಯಾರ್ಥಿಗಳು ಸಾಧಕರಾಗಲು ಹಾಗೂ ಗುರಿ ಮುಟ್ಟಲು ಸತತ ಪ್ರಯತ್ನ ಪಡಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಜತೆಗೆ ಮೌಲ್ಯಗಳು ಹಾಗೂ ಪರೀಕ್ಷೆಗೆ ಬೇಕಾಗುವಂತಹ ತಯಾರಿ ಮಾಡಿಕೊಳ್ಳುವುದು ಸೂಕ್ತ ಎಂದರು.
ಧಾರವಾಡದ ಗುರುದೇವ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಿರ್ದೇಶಕ ಅಖಿಲಕುಮಾರ ಆರ್.ಹಲಗತ್ತಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಪ್ರವೀಣ ಪಾಟೀಲ, ಭುವನ ಹಿರೇಮಠ, ಶಿವಶಂಕರ ಹಿರೇಮಠ,
ಮಹಾಲಿಂಗ ಕಮತಗಿ, ಮಹೇಶ ಕಲ್ಲೋಳಿ, ಬಸವರಾಜ ತುಬಾಕಿ, ಸವಿತಾ ಕಾಸಿಗಾರ ಇತರರಿದ್ದರು.