ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಶಿವಲೀಲಾ ಬುಟಾಳೆ, ಭುವನೇಶ್ವರಿ ಯಂಕಚ್ಚಿ, ಸಚಿನ ದೇಸಾಯಿ, ಬಸಗೌಡ ಕಾಗೆ, ಚಿದಾನಂದ ಮೇತ್ರಿ, ಅರುಣ ಯಲಗುದ್ರಿ, ಕಲ್ಲೇಶ ಮಡ್ಡಿ, ಡಾ.ಸ್ಮಿತಾ ಚೌಗಲಾ ಇತರರಿದ್ದರು. 
ಬೆಳಗಾವಿ

ಪೋಲಿಯೋ ತೊಲಗಿಸಲು ಶ್ರಮಿಸಿ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಲಕ್ಷ್ಮಣ ಸವದಿ ಕರೆ
  • ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಲಿ
ಅಥಣಿ: ಆರೋಗ್ಯವಂತ ಮಕ್ಕಳೇ ದೇಶದ ಭವಿಷ್ಯವಾಗಿರುವುದರಿಂದ, ಪಾಲಕರು ನಿರ್ಲಕ್ಷ್ಯ ವಹಿಸದೆ ಪೋಲಿಯೋ ಹನಿ ಹಾಕಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪೋಲಿಯೋ ಎಂಬ ಮಾರಕ ಕಾಯಿಲೆ ಸಂಪೂರ್ಣ ನಿರ್ಮೂಲನೆ ಮಾಡಲು ಪಾಲಕರು ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪ್ರತಿ ವಾರ್ಡಿನ ಬೂತ್‌ಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಇರುವುದು ಎಲ್ಲರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿ, ಜೂ.೨೮ರಿಂದ ಜು.೧ರವರೆಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಬೂತ್‌ಗಳಲ್ಲಿ ಲಸಿಕೆ ಪಡೆಯದ ಮಕ್ಕಳನ್ನು ಪತ್ತೆ ಹಚ್ಚಿ ಲಸಿಕೆ ನೀಡಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಡಾ.ಸ್ಮಿತಾ ಚೌಗಲಾ, ರೋಟರಿ ಕ್ಲಬ್ ಅಧ್ಯಕ್ಷ ಸಚಿನ ದೇಸಾಯಿ, ಅರುಣ ಯಲಗುದ್ರಿ, ಶೇಖರ ಕೋಲಾರ, ರಾಜು ಗುಡೋಡಗಿ, ಮಲ್ಲು ಬುಟಾಳೆ, ಮಲ್ಲೇಶ ಹುದ್ದಾರ, ಶಶಿಕಾಂತ ಹುಲಕುಂದ, ರವಿ ಬಡಕಂಬಿ, ಕಲ್ಲೇಶ ಮಡ್ಡಿ ಇತರರಿದ್ದರು.