ಅಥಣಿ ನಗರಸಭೆಯಾದ ಪ್ರಯುಕ್ತ ಹಿರಿಯರು ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿದರು. ಡಾ.ಮಲ್ಲಿಕಾರ್ಜುನ ಹಂಜಿ, ವಿಜಯ ಬುರ್ಲಿ, ಈರಯ್ಯ ಜಗದಾಳಮಠ ಇತರರಿದ್ದರು.
- ಶಾಸಕ ಲಕ್ಷ್ಮಣ ಸವದಿ ಹೇಳಿಕೆ
- ನಾಗರಿಕರಿಂದ ಸನ್ಮಾನ ಸ್ವೀಕಾರ
ಅಥಣಿ: ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕಾರಣರಾದ ಸಿಎಂ, ಡಿಸಿಎಂ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಥಣಿ ಪಟ್ಟಣದ ಸುಧಾರಣೆಗೆ ಸರ್ಕಾರದಿಂದ ಹೆಚ್ಚು ಅನುದಾನ ಸಿಗಲಿದ್ದು, ಸಿಬ್ಬಂದಿ ನೇಮಕಾತಿ ಆಗಲಿದೆ. ಮಹಾರಾಷ್ಟ್ರದ ಪುಣೆ ಮತ್ತು ಅಥಣಿಯಲ್ಲಿ ಏಕಕಾಲಕ್ಕೆ ಪುರಸಭೆ ಆರಂಭವಾಗಿದ್ದವು. ಪುಣೆ ಮಹಾನಗರ ಪಾಲಿಕೆಯಾಗಿದೆ. ಅಥಣಿ ಪಟ್ಟಣ ನಗರಸಭೆಯಾಗಲು ಶತಮಾನವೇ ಬೇಕಾಯಿತು. ಹೆಚ್ಚು ಅನುದಾನ ತಂದು ನಗರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಅಥಣಿ ಈಗ ನಗರಸಭೆಯಾಗಿರುವುದು ಸಂತಸ ತಂದಿದೆ ಎಂದರು.
ನಗರದ ಹಿರಿಯರು ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು. ಅಥಣಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಕೂಡ ವರದಿ ಪ್ರಕಟಿಸಿತ್ತು.
ಡಾ.ಮಲ್ಲಿಕಾರ್ಜುನ ಹಂಜಿ, ವಿಜಯ ಬುರ್ಲಿ, ಈರಯ್ಯ ಜಗದಾಳಮಠ, ಮನೋಹರ ಹಂಜಿ, ಅಣಪ್ಪ ಹುದ್ದಾರ, ವಸಂತ ಗಿರಡೆ, ಚಿದಾನಂದ ನರಗಟ್ಟಿ, ಸಂತೋಷ ಗುಂಡಾ, ದತ್ತಾ ವಾಸ್ಟರ್, ಮಹಾಂತೇಶ ಕೋಹಳ್ಳಿ, ಪ್ರವೀಣ ದಡೆದ, ಪ್ರಕಾಶ ಅಳ್ಳಿಮಟ್ಟಿ, ರಾಜು ಗುಡೋಡಗಿ, ಮಲ್ಲು ಬುಟಾಳೆ, ರಾಜು ಬುಲಬುಲೆ, ರಾಮನಗೌಡ ಪಾಟೀಲ, ಮಲ್ಲು ಹುದ್ದಾರ, ವಿಲೀನ ಯಳಮಲೆ, ಸಯ್ಯದ್‌ಅಮೀನ್ ಗದ್ಯಾಳ, ಬಸವರಾಜ ಪಾಟೀಲ, ಆಸೀಫ್ ತಾಂಬೋಳಿ, ಕಲ್ಲೇಶ ಮಡ್ಡಿ, ಬಸವರಾಜ ಹಳ್ಳದಮಳ ಇತರರಿದ್ದರು.
ಸಿಹಿಹಂಚಿ ಸಂಭ್ರಮ ಆಚರಿಸಿದ ನಾಗರಿಕರು
ಅಥಣಿ: ಇಲ್ಲಿನ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಅನುಮೋದನೆ ನೀಡಿದೆ. ಶಾಸಕ ಲಕ್ಷ್ಮಣ ಸವದಿ ಅವರ ಸತತ ಪ್ರಯತ್ನದಿಂದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಆವರಣದಲ್ಲಿ ಕಾರ್ಮಿಕರು, ಸದಸ್ಯರಿಗೆ ಸಿಹಿಹಂಚಿ ಸಂಭ್ರಮಿಸಿದ ಬಳಿಕ ಮಾತನಾಡಿ, ನಗರಸಭೆಯಿಂದ ಅಭಿವೃದ್ಧಿಗೆ ವೇಗ ಹೆಚ್ಚಲಿದೆ ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಬಸವರಾಜ ನಾಯಿಕ, ಸಂತೋಷ ಸಾವಡಕರ, ದಿಲೀಪ ಲೊನಾರೆ, ಶಶಿಕಾಂತ ಹುಲಕುಂದ, ನರಸು ಬಡಕಂಬಿ, ರಮೇಶ ಗಡದೆ, ರಮೇಶ ಪವಾರ, ಮೃಣಾಲಿನಿ ದೇಶಪಾಂಡೆ, ವಿದ್ಯಾ ಬುಲಬುಲೆ, ವಿದ್ಯಾ ಐಹೊಳೆ ಇತರರಿದ್ದರು.