ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾಗೋಷ್ಠಿಯಲ್ಲಿ ಸುವರ್ಣಾತಾಯಿ ಹೊಸಮಠ ಅವರನ್ನು ಸನ್ಮಾನಿಸಲಾಯಿತು. ಮುರುಘೇಂದ್ರ ಸ್ವಾಮೀಜಿ, ಸುರೇಖಾ ಹಿರೇಮಠ, ಮಂಜುಳಾ ಚವಡಪ್ಪನವರ, ಲಕ್ಷ್ಮೀ ಕನ್ನಪ್ಪನವರ ಇತರರಿದ್ದರು. 
ಬೆಳಗಾವಿ

ದೇಶದ ಅಭಿವೃದ್ಧಿಯಲ್ಲಿ ಸ್ತ್ರೀ ಪಾತ್ರ ಪ್ರಮುಖ

ತಲ್ಲೂರ: ಕುಟುಂಬ ನಿರ್ವಹಣೆಯಿಂದ ಹಿಡಿದು ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಗೋಕಾಕ ಜ್ಞಾನ ಮಂದಿರದ ಧರ್ಮದರ್ಶಿ ಸುವರ್ಣಾತಾಯಿ ಹೊಸಮಠ ಹೇಳಿದರು.
ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರುದ್ರಹೋಮ, ವಿಶೇಷ ಪೂಜೆ, ರಥದ ಶಾಲೆ, ವಾಸ್ತುಶಾಂತಿ, ಉಡಿ ತುಂಬುವುದು ಹಾಗೂ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಆಲದಕಟ್ಟಿ ಗ್ರಾಮದ ಭಕ್ತರು ಒಗ್ಗೂಡಿ ನಿಸ್ವಾರ್ಥ ಮನೋಭಾವದಿಂದ ಧಾರ್ಮಿಕ ಸೇವೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ದಾಸೋಹ ಸೇವೆ ಸಲ್ಲಿಸಿದ ಅನ್ವಿತ ಮುಗಳಿ, ವಿರೂಪಾಕ್ಷ ಸಣ್ಣಗೌಡ್ರ ಅವರನ್ನು ಸನ್ಮಾನಿಸಲಾಯಿತು. ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗದಗ ಹರ್ತಿಮಠದ ಸದಾನಂದಶಾಸಿ, ನಿಂಗಯ್ಯ ಸ್ವಾಮೀಜಿ, ಸಿದ್ದೇಶಕುಮಾರ ಹೊಳಲ, ಈರಯ್ಯಶಾಸಿ, ರುದ್ರಯ್ಯ ಹಿರೇಮಠ, ರುದ್ರವ್ವ ಕೊಳವಿ, ಪಾರ್ವತಿ ಹೊಸವಾಳ, ರುಕ್ಷ್ಮಿಣಿ ಕಡಕೋಳ, ದುಂಡಮ್ಮ ಚವಡೆಪ್ಪನವರ, ಕಾಶವ್ವ ಗುರುನಗೌಡ್ರ, ಪತ್ರೆವ್ವ ಜಮಾದಾರ, ದುಂಡವ್ವ ಮನನ್ನವರ, ಸುರೇಖಾ ಹಿರೇಮಠ, ಮಂಜುಳಾ ಚವಡಪ್ಪನವರ, ಲಕ್ಷ್ಮೀ ಕನ್ನಪ್ಪನವರ, ತಾಯವ್ವ ಕನ್ನಪ್ಪನವರ ಇತರರಿದ್ದರು.