ಭಿರಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಿ.ಎಂ.ಐಹೊಳೆ ಉದ್ಘಾಟಿಸಿದರು. ಕವಿತಾ ಮಿಶ್ರಾ, ಎಸ್.ಬಿ.ಪಾಟೀಲ, ಪ್ರಶಾಂತ ಕುಮಾರ ಇತರರಿದ್ದರು. 
ಬೆಳಗಾವಿ

ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಅನನ್ಯ

ರಾಯಬಾಗ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ, ಪುರುಷರ ಸಮಾನವಾಗಿ ನಿಂತಿದ್ದಾರೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಭಿರಡಿ ಗ್ರಾಮದಲ್ಲಿ ಕೋರಮಂಡಲ ಇಂಟರ್ ನ್ಯಾಷನಲ್ ಲಿ. ಹಾಗೂ ವೀರಭದ್ರೇಶ್ವರ ಫರ್ಟಿಲೈರ‍್ಸ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋರಮಂಡಲ ಕಂಪನಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಶೌಚಗೃಹ ನಿರ್ಮಿಸಿರುವುದು ಶ್ಲಾಘನೀಯ. ರೈತರ ಮಕ್ಕಳಿಗೆ ಹೆಣ್ಣು ನೀಡಲು ಹೆಣ್ಣು ಹೆತ್ತವರು ಮುಂದೆ ಬರಬೇಕು ಎಂದರು.
ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ರೈತ ಮಹಿಳೆಯರು ತಮ್ಮನ್ನು ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಕೃಷಿಯಲ್ಲಿ ಅಪಾರ ಸಾಧನೆ ಮಾಡಬಹುದು ಎಂಬುದಕ್ಕೆ ನಾನೇ ಉದಾಹರಣೆ. ಕೃಷಿಕರು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.

ಸಿಐಎಲ್ ರಾಜ್ಯ ಮುಖ್ಯಸ್ಥ ಎಸ್.ಬಿ.ಪಾಟೀಲ, ಬೇಸಾಯ ತಜ್ಞ ಪ್ರಶಾಂತ ಕುಮಾರ, ಸಪ್ನಾ ನಾಯ್ಡು, ರಂಜಿತಕುಮಾರ, ಮಹಾದೇವ ಬೋರಗಾಂವೆ, ಬಸವರಾಜ ದಡವಾಡ, ಸದಾಶಿವ ಘೋರ್ಪಡೆ, ಎ.ಬಿ.ನಡೋಣಿ, ಶಂಕರ ಗಡಕರಿ ಇತರರು ಇದ್ದರು.