ಬೆಳಗಾವಿ ನಗರದ ಚನ್ನಮ್ಮ ವೃತ್ತದದ ಬಳಿ ಸಾಹಿತ್ಯ ಭವನ ಆವರಣದಲ್ಲಿ ಶನಿವಾರ ನಾರಿ ಶಕ್ತಿ ಪೋರಂ, ಬಿಜೆಪಿ ಮಹಿಳಾ ಮೋರ್ಚಾ ಹಾಗೂ ವಿವಿಧ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನಾ ರ‌್ಯಾಲಿ ನಡೆಸಿದರು. ಡಾ. ಸೋನಾಲಿ ಸರ್ನೋಬತ್, ಡಾ. ನಯನಾ ಭಸ್ಮೆ ಇತರರಿದ್ದರು. 
ಬೆಳಗಾವಿ

ಕಾಂಗ್ರೆಸ್ ವಿರುದ್ಧ ಮಹಿಳೆಯರ ಪ್ರತಿಭಟನೆ

ಮಂಜುನಾಥ ಕೋಳಿಗುಡ್ಡ
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ವಿರುದ್ಧ ಶನಿವಾರ ನಗರದಲ್ಲಿ ನಾರಿ ಶಕ್ತಿ ಪೋರಂ, ಬಿಜೆಪಿ ಮಹಿಳಾ ಮೋರ್ಚಾ ಹಾಗೂ ವಿವಿಧ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನಾ ರ‌್ಯಾಲಿ ನಡೆಸಿದರು.
ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದಾಗ ವಿರೋಧ ಪಕ್ಷಗಳು ಒಂದಾಗಿ ಸೋಲಿಸಿದವು. ಇದನ್ನು ಜಾರಿಗೊಳಿಸುತ್ತಿರುವ ಉದ್ದೇಶ, ಇದರಿಂದ ಮಹಿಳೆಯರಿಗೆ ಸಿಗುವ ಅವಕಾಶಗಳ ಕುರಿತು ತಿಳಿಸಿದರೂ ಅರ್ಥ ಮಾಡಿಕೊಳ್ಳಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದರ ಯಶಸ್ಸಿನ ಲಾಭ ಸಿಗುತ್ತದೆ ಎಂಬ ಭಯದಲ್ಲಿ ಕಾಂಗ್ರೆಸ್‌ವಿರೋಧ ಮಾಡುತ್ತಿದೆ.
ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿರುವ ಕಾಂಗ್ರೆಸ್ ಕಾಂಗ್ರೆಸ್ ಹಿಂದಿನಿಂದಲೂಮಹಿಳೆಯರಿಗೆ ಸಿಗಬಹುದಾದ ಸಾಂವಿಧಾನಿಕ ಹಕ್ಕುಗಳನ್ನು ತಪ್ಪಿಸುತ್ತಲೇಬಂದಿದೆ. ಗಂಗೆ, ನರ್ಮದಾ, ಸಿಂಧೂ ಎಂದು ನದಿಗಳಿಗೆ ಮಹಿಳೆಯರ ಹೆಸರನ್ನು ಇಟ್ಟು ಗೌರವಿಸಿರುವ ಭಾರತದಲ್ಲಿ ಅವರಿಗೆ ಅಗೌರವ ತೋರು ವವರನ್ನು ಸಹಿಸಿಕೊಳ್ಳುವುದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್, ಮಹಾನಗರ ಅಧ್ಯಕ್ಷೆ ಗೀತಾ ಸುತಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕೆಕ್ರೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ನಯನಾ ಭಸ್ಮೆ, ಮಹಿಳಾ ಮೋರ್ಚಾ ಅಧ್ಯಕ್ಷೆ, ಉಜ್ವಲಾ ಬಡವನ್ನಾಚೆ, ಸಾರಿಕಾ ಪಾಟೀಲ, ವಿದ್ಯಾ ಪಾಟೀಲ,ಪ್ರಿಯಾ ಪುರಾಣಿಕ, ಆಶಾ ಯಮಕನಮರ್ಡಿ ಇತರರಿದ್ದರು.
-