ಬೆಳಗಾವಿಯ ಸದಾಶಿವ ನಗರ ಮುಖ್ಯ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಕಟ್ಟಡ. 
ಬೆಳಗಾವಿ

ಸದಾಶಿವ, ನೆಹರು ಸಂಕಷ್ಟ ಕೇಳುವವರಾರು?

ಬಡಾವಣೆ ಬವಣೆ

  • ಡಿ.ವಿ.ಕಮ್ಮಾರ ಬೆಳಗಾವಿ
ಬೆಳಗಾವಿಯ ಅವಳಿ ನಗರಗಳೆನಿಸಿಕೊಂಡಿರುವ ಸದಾಶಿವ ನಗರ ಮತ್ತು ನೆಹರು ನಗರಗಳಲ್ಲಿ ಹತ್ತಾರು ಸಮಸ್ಯೆಗಳಿವೆ. ಸದಾಶಿವ ನಗರದ ಬಹುತೇಕ ಕಾಲನಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಸರಿಯಾದ ಗಟಾರುಗಳೂ ಇಲ್ಲ. ಬೀದಿಗಳೇ ಚರಂಡಿಯಾಗಿವೆ. ಸಾಮರ್ಥ್ಯ ಮೀರಿ ಜನವಸತಿ ಬೆಳೆದಿರುವ ನೆಹರು ನಗರವಂತೂ ಅಕ್ಷರಶಃ ಅಪ್ಪಚ್ಚಿಯಾಗುತ್ತಿದೆ.
ಸದಾಶಿವ ನಗರದಲ್ಲಿ ಹೆಚ್ಚಾದ ಜನವಸತಿಗೆ ಅನುಗುಣವಾಗಿ ಒಳಚರಂಡಿ ನಿರ್ಮಾಣಕ್ಕೆ ನೆಲ ಅಗೆಯಲು ಕಲ್ಲು-ಬಂಡೆಗಳು ಅಡ್ಡಿಯಾದ ಕಾರಣ ಒಳಚರಂಡಿ ಯೋಜನೆ ಕೈ ಬಿಡಲಾಗಿತ್ತು. ಪ್ರಸ್ತುತ ಬಂಡೆಗಲ್ಲು ಸೀಳುವ ಯಂತ್ರಗಳು ಬಂದಿದ್ದರೂ ಒಳಚರಂಡಿ ನಿರ್ಮಿಸುತ್ತಿಲ್ಲ. ಇಂದಿಗೂ ಬಹುತೇಕ ಮನೆ ಮತ್ತು ವಾಣಿಜ್ಯ ಕಟ್ಟಡಗಳು ಸೆಪ್ಟಿಕ್ ಟ್ಯಾಂಕ್ ಆಧರಿತ ವ್ಯವಸ್ಥೆಯನ್ನೇ ಆಧರಿಸಿವೆ
.
ಸದಾಶಿವ ನಗರ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ವಸತಿನಿಲಯ ಪಕ್ಕದ 6ನೇ ಕ್ರಾಸ್‌ದಲ್ಲಿ ಹಾಳಾದ ರಸ್ತೆ ಮೇಲೆ ನೆಹರು ನಗರದ ತ್ಯಾಜ್ಯ ನೀರು ಹರಿಯುತ್ತಿದೆ. ಮಳೆಯಾದರೆ ಈ ನೀರು ಮನೆಗಳಿಗೂ ನುಗ್ಗುವುದರಿಂದ ಹಲವರು ಸ್ವಂತ ಮನೆ ಖಾಲಿ ಮಾಡಿ ಬೇರೆ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ನೆಹರು ನಗರದ ಮಹದೇವ ಮಂದಿರಕ್ಕೂ ಆಗಾಗ ಚರಂಡಿ ನೀರು ನುಗ್ಗುತ್ತಿದೆ. ನೆಹರು ನಗರದಲ್ಲಿ ಈಚೆಗೆ ಹಲವು ವಾಣಿಜ್ಯ ಉದ್ದೇಶದ ಬೃಹತ್ ಮಳಿಗೆಗಳು ನಿರ್ಮಾಣಗೊಂಡಿರುವುದರಿಂದ ಇಕ್ಕಟ್ಟಾದ ಬೀದಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.
ಸಂಚಾರ ದಟ್ಟಣೆ:
ಸದಾಶಿವ ನಗರದ ಮುಖ್ಯ ರಸ್ತೆ, ಪಾದಚಾರಿ ಮಾರ್ಗ ಮತ್ತು ಸೈಕಲ್ ಪಥ ಬೀದಿಬದಿ ವ್ಯಾಪಾರಿಗಳ ಪಾಲಾಗಿರುವುದರಿಂದ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಇದರಿಂದ ದಿನೇದಿನೆ ಸಂಚಾರ ಸಿಕ್ಕು ಹೆಚ್ಚುತ್ತಿದೆ. ನೆಹರು ನಗರದ ಮಹಾದೇವ ಗುಡಿ ಎಡಭಾಗದ ರಸ್ತೆಯಿಂದ ಸದಾಶಿವ ನಗರದ 9ನೇ ಕ್ರಾಸ್ ಸೇರುವಲ್ಲಿ ಟ್ರಾೃಕ್ ಸಿಗ್ನಲ್ ಅವಶ್ಯ ಇದೆ. ಗುಡಿ ಬಲಭಾಗದ 2ನೇ ಕ್ರಾಸ್‌ನಿಂದ ಮುಖ್ಯ ರಸ್ತೆಗೆ ಸೇರುವಲ್ಲಿ ಇಳಿಜಾರು ಇರುವ ಕಾರಣದಿಂದ ವಾಹನಗಳ ನಿಯಂತ್ರಣ ತಪ್ಪಿ ಅಪಘಾತಗಳಾದ ಹಲವು ಪ್ರಕರಣಗಳು ನಡೆದಿದೆ.
ಅನೈತಿಕ ಚಟುವಟಿಕೆಗಳ ತಾಣ
ಸದಾಶಿವ ನಗರ ಮುಖ್ಯ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ ಕಟ್ಟಡ ಪುಂಡ-ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಹಗಲು ಹೊತ್ತಲ್ಲೇ ಪಾರ್ಟಿ, ಮೋಜು-ಮಸ್ತಿ ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಅಸಹನೀಯವಾಗಿದೆ.
"

ಮನೆಗಳಿಗೆ ಕೊಳಚೆ ನೀರು ನುಗ್ಗುವುದರಿಂದ ಸ್ವಂತ ಮನೆ ಇದ್ದರೂಬೇರೆಡೆ ಬಾಡಿಗೆ ಮನೆಯಲ್ಲಿರುವ ಪರಿಸ್ಥಿತಿ ನಮಗೆ ಬಂದಿದೆ. ಈಕುರಿತು ಸ್ಥಳೀಯ ಶಾಸಕರನ್ನು ಲೆಕ್ಕವಿಲ್ಲದಷ್ಟು ಸಲ ಭೇಟಿ ಮಾಡಿಅಳಲು ತೋಡಿಕೊಂಡಿದ್ದೇವೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶಅವರಲ್ಲೂ ಬಡಾವಣೆ ಬವಣೆ ಬಗ್ಗೆ ಹೇಳಿಕೊಂಡಿದ್ದೇವೆ. ಆದರೂಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ.