ಅರಟಾಳದಲ್ಲಿ ಸರ್ಕಾರಿ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶಾಸಕ ಲಕ್ಷ÷್ಮಣ ಸವದಿ, ಅಮರೇಶ್ವರ ಮಹಾರಾಜರು, ಅದ್ವೈತಾನಂದ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಸುಶಿಕ್ಷಿತ ಮಕ್ಕಳೇ ದೇಶದ ಸಂಪತ್ತು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಲಕ್ಷ್ಮಣ ಸವದಿ ಅನಿಸಿಕೆ
  • ಅರಟಾಳ ಸರ್ಕಾರಿ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮ
ಅರಟಾಳ: ಜೀವನ ಕಟ್ಟಿಕೊಳ್ಳಲು ಶಿಕ್ಷಣ ಪಡೆಯಬೇಕು. ಪಾಲಕರು ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿದರೆ ಅದುವೇ ದೇಶದ ಸಂಪತ್ತು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರ ಇಪ್ಪತ್ತು ವರ್ಷಗಳ ಬೇಡಿಕೆಯಾದ ಪ್ರೌಢಶಾಲೆ ಶಿಕ್ಷಣದ ಕನಸು ಈಗ ನನಸಾಗುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣ ಪಡೆದು ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಆಶಿಸಿದರು. ಈಗಾಗಲೇ ಗ್ರಾಮದ ಬನದನಾಳ ಕೆರೆ ತುಂಬಿದೆ. ಮುಂಬರುವ ಜೂನ್ ತಿಂಗಳಿನಲ್ಲಿ ವಜ್ರವಾಡ, ಕಾಂತ್ರಾಳ ಕೆರೆಗೆ ನೀರು ಹರಿಸಲಾಗುವುದು ಎಂದರು.
ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಅಥಣಿ ಶಾಸಕರು ತಾಲೂಕಿಗೆ ನೀರಾವರಿ, ಶಿಕ್ಷಣ, ಕೃಷಿ ಸೇರಿ ಇತರ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದ್ದಾರೆ. ಬಡಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದೆAದು ತಾಲೂಕಿಗೆ ಏಕಕಾಲಕ್ಕೆ ೯ ಪ್ರೌಢಶಾಲೆ ಮಂಜೂರು ಮಾಡಿಸಿದ್ದಾರೆ ಎಂದು ಶ್ಲಾಘಿಸಿದರು.
ಎಸ್‌ಡಿಎಸ್‌ಸಿ ಸದಸ್ಯ ವಿಠ್ಠಲ ಹಟ್ಟಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಪ್ರಯತ್ನದಿಂದ ಮಂಜೂರಾದ ಪ್ರೌಢಶಾಲೆಯಿಂದ ನಮ್ಮೂರಿನ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.
ವಿಜಯಪುರದ ಅದ್ವೈತಾನಂದ ಸ್ವಾಮೀಜಿ, ಶಿವಲಿಂಗ ಪೂಜಾರಿ, ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಪಿಡಿಒ ಮಡಿವಾಳಪ್ಪ ರಾಮಗೊಂಡ, ಎ.ಜಿ.ಎಡಕೆ, ಜಿ.ಎಂ.ಹಿರೇಮಠ, ಎಸ್.ಎಸ್.ಉಗಾರ, ವಕೀಲ ಅಮೋಘ ಖೊಬ್ರಿ, ಅಪ್ಪಾಸಾಬ ಕಲಮಡಿ, ಯಂಕಪ್ಪ ಅಸ್ಕಿ, ಶಿವಪ್ಪ ಹಟ್ಟಿ, ಮಲ್ಲಪ್ಪ ಪೂಜಾರಿ, ರಾಮಪ್ಪ ಪೂಜಾರಿ, ಕಳಸಪ್ಪ ಹೊನಗೌಡ, ಭೀಮು ಡಂಗಿ, ಈಶ್ವರಲಿಂಗ ಕಲಘಟಗಿ, ಡಾ.ವಿಲಾಸ ಜಂಬಗಿ, ರಮೇಶ ಜಾಧವ, ಅರವಿಂದ ಘಾಟಗೆ, ವಿಠ್ಠಲ ಹಟ್ಟಿ, ಮಲ್ಲಿಕಾರ್ಜುನ ತೆಲಸಂಗ, ರಮೇಶ ವಡ್ಡರ, ವಾಸನಗೌಡ ಜಂಬಗಿ, ಕಲ್ಮೇಶ
ತೆಲಸಂಗ, ಸಂಗಮೇಶ ಹಚಡದ, ಸುರೇಶ ರಜಪೂತ, ಪಿ.ಎಸ್.ಮಸಲಿ, ಅರಟಾಳ ಬಾಡಗಿ, ಹಾಲಳ್ಳಿ ಗ್ರಾಮಸ್ಥರು ಇದ್ದರು.
ಗ್ಯಾರಂಟಿಗಳು ಅಭಿವೃದ್ಧಿಗೆ ತೊಡಕಲ್ಲ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿಲ್ಲ. ಅಥಣಿ ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಸಕ್ತ ವರ್ಷ ಸರ್ಕಾರ ೯ ಪ್ರೌಢಶಾಲೆ, ಮೂರು ಪಿಯು ಕಾಲೇಜು, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆ, ಮೌಲಾನಾ ಆಜಾದ ಶಾಲೆ, ಮುರಾರ್ಜಿ ಶಾಲೆ, ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.