ಶಿರಗುಪ್ಪಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಂಘದ 26 ಮುನಿಗಳು ಪಾಲ್ಗೊಂಡಿದ್ದರು. 
ಬೆಳಗಾವಿ

ಶಿರಗುಪ್ಪಿಯಲ್ಲಿ ಮುನಿಗಳಿಗೆ ಸ್ವಾಗತ

ಕಾಗವಾಡ: ಅಹಿಂಸಾ ತತ್ತ್ವ ಸಾರುತ್ತ, ಜೈನ ದಿಗಂಬರ ಮುನಿಗಳ ಸಂಘದ ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ 26 ದಿಗಂಬರ ಮುನಿಗಳು ಶ್ರವಣಬೆಳಗೋಳದಿಂದ ಶಿರಗುಪ್ಪಿವರೆಗೆ ಸುಮಾರು 700 ಕಿಮೀ ಪಾದಯಾತ್ರೆ ಮುಖಾಂತರ ಶುಕ್ರವಾರ ಗ್ರಾಮಕ್ಕೆ ಆಗಮಿಸಿದರು. ಜೈನ ಸಮುದಾಯದ ವತಿಯಿಂದ ಮುನಿಗಳನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಗ್ರಾಮದ ಪಾರ್ಶ್ವನಾಥ ಜೈನ ಭವನದಲ್ಲಿ 26 ದಿಗಂಬರ ಮುನಿಗಳ ವಿಶೇಷ ಪ್ರವಚನ ಕಾರ್ಯಕ್ರಮ ಜರುಗಿತು.
ಸಿದ್ಧಾಂತಸಾಗರ ಮುನಿ ಮಹಾರಾಜರು ಮಾತನಾಡಿ, ಆಚಾರ್ಯ ವರ್ಧಮಾನ ಸಾಗರಜೀ ಮುನಿ ಮಹಾರಾಜರಿಗೆ ಇರುವ ಆಚಾರ್ಯ ಪದವಿಯನ್ನು, ಮುನಿ ಸಂಘದ ಯುವ ದಿಗಂಬರ ಮುನಿಗಳಾದ ವಿದ್ಯಾಸಾಗರ ಮುನಿ ಮಹಾರಾಜರಿಗೆ ಆಚಾರ್ಯ ಪದವಿ ನೀಡುವ ಕಾರ್ಯಕ್ರಮ ೆ.19, 20ರಂದು ಜರುಗಲಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಕ್ರಮದ ಸ್ಥಳ ನಿಗದಿಪಡಿಸಲಾಗುವುದು ಎಂದರು.
ಹಿರಿಯ ವಕೀಲ ಅಭಯ ಅಕಿವಾಟೆ ಮಾತನಾಡಿ, ವಿದ್ಯಾಸಾಗರಜಿ ಮುನಿ ಮಹಾರಾರ ಆಚಾರ್ಯ ಪದವಿ ನೀಡುವ ಕಾರ್ಯಕ್ರಮ ಶಿರುಗುಪ್ಪಿ ಗ್ರಾಮದಲ್ಲಿ ನೆರವೇರಲಿ. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸುತ್ತೇವೆ ಎಂದು ಭರವಸೆ ನೀಡಿದರು.
ಮುಖಂಡ ರಾಜು ಪಾಟೀ, ಭಿಲವಡಿಯ ಎಸ್.ಆರ್.ಮಗದುಮ್ಮ, ರವಿ ಪಾಟೀ, ಶಿರಗುಪ್ಪಿ ಜೈನ ಸಮುದಾಯ ಅಧ್ಯಕ್ಷ ಮಹಾವೀರ ಕಾತ್ರಳೆ, ವಿಜ ಅಕಿವಾಟೆ, ಭಮ್ಮಣ್ಣ ಚೌಗುಲೆ, ಭೀಮು ಭೋಲೆ, ಬಾಬು ಕಾರದಗೆ, ಸುನಂದಾ ಕಾತ್ರಾಳ ಇತರರಿದ್ದರು.