ಮೂಡಲಗಿ ಪಟ್ಟಣದಲ್ಲಿ ಸತ್ಯಸಾಯಿ ಬಾಬಾ ಅವರ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಸ್ವಾಗತಿಸಲಾಯಿತು. ಪದ್ಮನಾಭ ಪೈ, ವಸಂತ ಬಾಳಿಗಾ, ಸುರೇಖಾ ಕುರಡೆಕರ, ಮಹಾದೇವಿ ಹುಕ್ಕೇರಿ ಇತರರಿದ್ದರು. 
ಬೆಳಗಾವಿ

ನಿಸ್ವಾರ್ಥ ಸೇವೆಯಿಂದ ಗುರುವಿನ ಅನುಗ್ರಹ

ಮೂಡಲಗಿ: ಅಹಂ ಭಾವ ತೊರೆಯುವ ಮೂಲಕ ನಿಸ್ವಾರ್ಥ ಸೇವಾ ಮನೋಭಾವದಿಂದ ಧಾರ್ಮಿಕ, ಸತ್ಸಂಗಗಳಲ್ಲಿ ಪಾಲ್ಗೊಂಡಾಗ ಮಾತ್ರ ಗುರುವಿನ ಅನುಗ್ರಹ ಲಭಿಸಲು ಸಾಧ್ಯ ಎಂದು ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಪದ್ಮನಾಭ ಪೈ ಹೇಳಿದರು.
ಪಟ್ಟಣದಲ್ಲಿ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥದ ಸ್ವಾಗತ ಹಾಗೂ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸತ್ಯಸಾಯಿ ಸೇವಾ ಸಂಸ್ಥೆಗಳ ಸೇವಾ ಸಂಯೋಜಕಿ ಪ್ರಿಯಾ ಪೈ, ಜಿಲ್ಲಾಧ್ಯಕ್ಷ ವಸಂತ ಬಾಳಿಗಾ ಮಾತನಾಡಿ, ನಿತ್ಯ ಒತ್ತಡದ ಬದುಕಿನ ಮಧ್ಯೆಯೂ ವರ್ಷದಲ್ಲಿ ಒಂದು ಬಾರಿಯಾದರೂ ನಾರಾಯಣ ಸೇವೆ ಮಾಡಬೇಕು. ಜತೆಗೆ ದುಡಿಮೆಯ ಅಲ್ಪ ಭಾಗ ದಾನ, ಧರ್ಮ ಹಾಗೂ ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ತಿಳಿಸಿದರು.
ಕುಂಭ, ಆರತಿ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಸ್ವಾಗತಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ವೃಂದಾ ಬಾಳಿಗಾ, ಸುರೇಖಾ ಕುರಡೆಕರ, ಮಹಾದೇವಿ ಹುಕ್ಕೇರಿ, ಕುಸುಮಾ ಪಾಟೀಲ, ಸಂಜೀವ ಪಾಟೀಲ, ಲೋಹಿತ ಕಲಾಲ, ವಿಕ್ರಮ ಮುರಳಿ, ಜೀವನ ಬಾಗಲಕೋಟ ಹಾಗೂ ಸತ್ಯಸಾಯಿ ಸೇವಾ ಕ್ಷೇತ್ರದ ಸದಸ್ಯರು ಪಾಲ್ಗೊಂಡಿದ್ದರು.