ಉಗರಖೋಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ್‌ಜಿ ಜಾಗೃತಿ ಅಭಿಯಾನದಲ್ಲಿ ರವಿ ಉಡಕೇರಿ, ಎಸ್.ಬಿ.ಜವಳಿ ಹಾಗೂ ರೈತರು ಇದ್ದರು.
ರೋಜಗಾರ್ ಆ್ಯಂಡ್ ಆಜೀವಿಕ ಮಿಷನ್(ಗ್ರಾಮೀಣ) ಯೋಜನೆಯ
ಐಇಸಿ ಚಟುವಟಿಕೆಯಡಿ ಕಾಯಕ ಬಂಧುಗಳಿಗೆ ಜಾಗೃತಿ ಅಭಿಯಾನ ಜರುಗಿತು.
370 ನಿಂದ 382 ರೂ. ಕೂಲಿ ದರ ಹೆಚ್ಚಳ ಹಾಗೂ 100ರಿಂದ 125ಕ್ಕೆ ಮಾನವ ದಿನ ಸೃಜನೆ ಕುರಿತು ಕೂಲಿಕಾರರು, ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಯೋಜನೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.
ಐಇಸಿ ಚಟುವಟಿಕೆಯಡಿ ಮನೆ ಮನೆ ಭೇಟಿ ನೀಡಿ ಗ್ರಾಮಸ್ಥರಿಗೆ ಯೋಜನೆಯ ಮಾಹಿತಿ ನೀಡಲಾಗುತ್ತಿದ್ದು, ರೋಜಗಾರ ದಿವಸ ಆಚರಣೆ, ಸಂಜೀವಿನಿ ಒಕ್ಕೂಟದ ಮಹಿಳೆಯರ ಸಭೆ ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಯೋಜನೆ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕ್ಕಾಗಿ ನೋಂದಾಯಿಸಿ, ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಕಾಮಗಾರಿಗಳಲ್ಲಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಲಾಯಿತು.
ಯೋಜನೆಯಡಿ ಲಭ್ಯವಿರುವ ಉದ್ಯೋಗಾವಕಾಶ ಸದುಪಯೋಗಪಡಿಸಿಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದರು. ಪಿಡಿಒ ರವಿ ಉಡಕೇರಿ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ ಇತರರಿದ್ದರು.