ಶಿರಸಂಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮರ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ವೀರೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ತೇಜಪ್ಪಆಚಾರ್ಯ ಮೂಕಿ, ಡಾ.ವೀರೇಶ ಬಡಿಗೇರ, ಪ್ರೊ.ಪಿ.ಬಿ ಬಡಿಗೇರ, ಶರತ್ ಆಚಾರ ಇತರರಿದ್ದರು.
ಶಿರಸಂಗಿ:
ಇಲ್ಲಿನ ಕಾಳಿಕಾ ದೇವಸ್ಥಾನದಲ್ಲಿ 25ನೇ ವಿಶ್ವಕರ್ಮರ ಪೂಜಾ ಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿಯ ಐಆರ್‌ಎಸ್ ಅಸಿಸ್ಟಂಟ್ ಕಮಿಷನರ್ ಶಂಕರಾಚಾರ್ಯ ಕಡ್ಲಾಸ್ಕರ, ದೇವಸ್ಥಾನದ ಪ್ರಧಾನ ಅರ್ಚಕ ತೇಜಪ್ಪ ಆಚಾರ್ಯ ಮೂಕಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಉಪಸ್ಥಿತರಿದ್ದರು.
ಕಾಳಿಕಾದೇವಿ ದೇವಸ್ಥಾನದಿಂದ ಬನ್ನಿ ಮಹಾಂಕಾಳಿ ದೇವಸ್ಥಾನದವರೆಗೆ ಪೂರ್ಣಕುಂಭ, ಕಲಾಮೇಳಗಳೊಂದಿಗೆ ಪಂಚಲೋಹದ ವಿಶ್ವಕರ್ಮರ ಮೂರ್ತಿ ಮೆರವಣಿಗೆ ಜರುಗಿತು. ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ.ಪಿ.ಬಿ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ಪ್ರದಾನ: ಪ್ರತಿವರ್ಷದಂತೆ ವಿಶ್ವಶಿಲ್ಪಿ ಡಕಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿಯ ಶಿಲ್ಪಿ ಶರತ್ ಆಚಾರ ಅವರಿಗೆ ಪ್ರದಾನ ಮಾಡಲಾಯಿತು. ರಾಜ್ಯಮಟ್ಟದ ವಿಶ್ವಕರ್ಮ ಭೂಷಣ ಪ್ರಶಸ್ತಿಯನ್ನು ಬೆಂಗಳೂರಿನ ಹಿಂದುಸ್ತಾನಿ ಸಂಗೀತ ಕಲಾವಿದ ದೇವೇಂದ್ರಕುಮಾರ ಪತ್ತಾರ, ವಿಶ್ವಕರ್ಮ ಸಂಗೀತ ಭೂಷಣ ಪ್ರಶಸ್ತಿ ಸೇರಿ ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ಪ್ರಶಸ್ತಿ ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.