ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಪಂಚಾಕ್ಷರಿ ಸ್ವಾಮೀಜಿ, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ ಇತರರಿದ್ದರು.
ಬಸವಣ್ಣನವರು ಹಾಗೂ ಸಮಕಾಲಿನ ಶರಣರ ಭಾವಚಿತ್ರ ಮೆರವಣಿಗೆ ಗುರುವಾರಪೇಟೆ ಮಾರ್ಗವಾಗಿ ವಿವಿಧ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ವೀರರಾಣಿ ಚನ್ನಮ್ಮ ವೃತ್ತದವರೆಗೆ ಸಾಗಿತು.
ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ ಮಾತಾಜಿ, ಮಾತೆ ಚಂದ್ರಾದೇವಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಡಾ.ಬಸವರಾಜ ಪರವಣ್ಣನವರ, ಡಾ.ಜಗದೀಶ ಹಾರುಗೊಪ್ಪ ಶರಣರಾದ ರಾಯಪ್ಪ ಹಣಜಿ, ಅಶೋಕ ಅಳ್ನಾವರ, ಡಿ.ಆರ್.ಪಾಟೀಲ, ಮಹೇಶ ಪೂಜೇರ, ಕೃಷ್ಣ ಬಾಳೆಕುಂದರಗಿ, ಅಷ್ಪಾಕ್ ಹವಾಲ್ದಾರ್,
ಪ್ರವೀಣಗೌಡ ಪಾಟೀಲ, ಕಿರಣ ಪಾಟೀಲ, ಸುಭಾಸ ರಾವಳ, ರೇಷ್ಮಾ ಅಳ್ನಾವರ, ದಾಕ್ಷಾಯಿಣಿ ಪಾಟೀಲ, ಸುಜಾತಾ ಪರಮ್ಮನವರ, ಡಾ.ಶ್ರೀಕಾಂತ ದಳವಾಯಿ, ಉಮಾದೇವಿ ಬಿಕ್ಕಣ್ಣವರ, ಸಂದೀಪ ದೇಶಪಾಂಡೆ, ಉಳವಪ್ಪ ಉಳ್ಳಾಗಡ್ಡಿ, ಪಿಎಸ್‌ಐ ಪ್ರವೀಣ ಗಂಗೋಳ ಹಾಗೂ ಪಪಂ ಸದಸ್ಯರು ಪಾಲ್ಗೊಂಡಿದ್ದರು.