ಐಗಳಿ ಕ್ರಾಸ್ ಮಾಣಿಕ ಪ್ರಭು ವಿರಕ್ತ ಮಠದ ಜಾತ್ರೋತ್ಸವದ ಆಹ್ವಾನ ಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಪ್ರಹ್ಲ್ಲಾದ ಪಾಟೀಲ, ಓಂಕಾರಯ್ಯ ಮಠಪತಿ ಇತರರಿದ್ದರು. 
ಬೆಳಗಾವಿ

ವಿರಕ್ತಮಠ ಜಾತ್ರೋತ್ಸವ ಸೋಮವಾರ

ಐಗಳಿ: ಜಾತ್ರೆ-ಉತ್ಸವಗಳ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಪ್ರಹ್ಲಾದ ಪಾಟೀಲ ಹೇಳಿದರು.
ಐಗಳಿ ಕ್ರಾಸ್ ಶ್ರೀ ಮಾಣಿಕಪ್ರಭು ವಿರಕ್ತಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಆಹ್ವಾನಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮಾ.2ರಿಂದ 6ರ ವರೆಗೆ ಜಾನುವಾರು ಪ್ರದರ್ಶನ ಮತ್ತು ಮಾರಾಟ, ಆಧ್ಯಾತ್ಮಿಕ ಪ್ರವಚನ, ರಥೋತ್ಸವ, ಕಡಬಿನ ಕಾಳಗ, ಜಂಗಿ ಕುಸ್ತಿ, ಹಾಸ್ಯ ಸಂಜೆ, ಶಿವಾನುಭವಗೋಷ್ಠಿ ಸೇರಿ ಹಲವಾರು ಕಾರ್ಯಕ್ರಮ ಶ್ರೀ ಮಠದ ಉತ್ತರಾಧಿಕಾರಿ ಅಭಿನವ ರಾಚೋಟೇಶ್ವರ ದೇವರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಓಂಕಾರಯ್ಯ ಮಠಪತಿ, ಮಲ್ಲುಗೌಡ ಪಾಟೀಲ, ಮೋಳೆಶ್ವರ ನೇಮಗೌಡ, ಎನ್.ಜಿ.ಪಾಟೀಲ, ಎ.ಎಸ್.ನಾಯಿಕ, ಭೀಮಗೌಡ ಪಾಟೀಲ, ಸಿದರಾಯ ಬಿರಾದಾರ, ಬಸಗೌಡ ಬಿರಾದಾರ, ಎಸ್.ಎಂ.ಕುಲಕರ್ಣಿ, ಜೆಟ್ಟೆಪ್ಪ ಗೌಡನವರ, ಸುರೇಶ ಬಿಜ್ಜರಗಿ, ದುಂಡಪ್ಪ ದೊಡಮನಿ, ಸುರೇಶ ಬಿರಾದಾರ, ಹನುಮಂತ ಬಿರಾದಾರ, ಭೀಮುಗೌಡ ಬಿರಾದಾರ, ಹನುಮಂತ ತೆಲಸಂಗ, ಪ್ರವೀಣ ಬಾಲಗಾವಿ, ಕಾಡಪ್ಪ ಬಿರಾದಾರ, ಬಾಪುರಾಯ ತಿಕೋಟಿ, ಕೆ.ಎಸ್.ಬಿಜ್ಜರಗಿ ಇತರರಿದ್ದರು.