ಬೆಳಗಾವಿ ಹೊನಗಾ ಕೈಗಾರಿಕಾ ಪ್ರದೇಶದಲ್ಲಿರುವ ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಶೇಖ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿದರು.
ಬೆಳಗಾವಿ: ಹೊನಗಾ ಕೈಗಾರಿಕಾ ಪ್ರದೇಶದಲ್ಲಿರುವ ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಈಚೆಗೆ ಭೇಟಿ ನೀಡಿದ ಶೇಖ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದ ಕಾರ್ಯವೈಖರಿ, ಪತ್ರಿಕೆ ಮುದ್ರಣದ ಹಂತಗಳು ಹಾಗೂ ಆಧುನಿಕ ಮುದ್ರಣ ತಂತ್ರಜ್ಞಾನವನ್ನು ಸಮೀಪದಿಂದ ನೋಡಿ ಬೆರಗಾದರು.
ಪತ್ರಿಕೆಯ ಪುಟ ವಿನ್ಯಾಸ, ಸುದ್ದಿ ಸಂಗ್ರಹದಿಂದ ಮುದ್ರಣದವರೆಗೆ ನಡೆಯುವ ಪ್ರತಿಯೊಂದು ಹಂತವನ್ನು ಆಸಕ್ತಿಯಿಂದ ವೀಕ್ಷಿಸಿದರು. ಸುದ್ದಿಗಳ ಸಂಪಾದನೆ, ಅತ್ಯಾಧುನಿಕ ಯಂತ್ರಗಳ ಮೂಲಕ ಪತ್ರಿಕೆ ಮುದ್ರಿಸುವ ವಿಧಾನ ಹಾಗೂ ಗುಣಮಟ್ಟ ಕಾಪಾಡುವ ಪ್ರಕ್ರಿಯೆಗಳ ಕುರಿತು ಸಿಬ್ಬಂದಿ ಮಾಹಿತಿ ನೀಡಿದರು.
ಪ್ರಿಂಟಿಂಗ್ ಪ್ರೆಸ್‌ನಲ್ಲಿನ ಅತ್ಯಾಧುನಿಕ ಯಂತ್ರೋಪಕರಣ, ವೇಗದ ಮುದ್ರಣ ವ್ಯವಸ್ಥೆ ಹಾಗೂ ಪತ್ರಿಕೆ ತಯಾರಾಗುವ ಪ್ರಕ್ರಿಯೆ ಕಂಡು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ತರಗತಿಯಲ್ಲಿ ಕಲಿಯುವ ವಿಷಯಗಳಿಗೆ ಪೂರಕವಾಗಿ ಪ್ರಾಯೋಗಿಕ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ಈ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರಿಗೆ ಧನ್ಯವಾದ ತಿಳಿಸಿದರು.
"
ಮುದ್ರಣಾಲಯ ಭೇಟಿ ಹೊಸ ಅನುಭವ ನೀಡಿದೆ. ಪತ್ರಿಕೆ ಹೇಗೆ ರೂಪುಗೊಳ್ಳುತ್ತದೆ. ಸುದ್ದಿ ಹೇಗೆ ಓದುಗರ ಕೈ ಸೇರುತ್ತದೆ ಎಂಬುದನ್ನು ನೇರವಾಗಿ ನೋಡಲು ಅವಕಾಶ ದೊರೆಯಿತು. ಇದರಿಂದ ಹೊಸ ವಿಷಯ ಕಲಿಯುವುದರ ಜತೆಗೆ ಮಾಧ್ಯಮ ಕ್ಷೇತ್ರದ ಕಾರ್ಯವೈಖರಿ ತಿಳಿದುಕೊಳ್ಳಲು ಸಾಧ್ಯವಾಯಿತು.
— ಝಬಾಖಾನ್ ಮುಲ್ಲಾ ಉಪನ್ಯಾಸಕಿ
"
ಶೈಕ್ಷಣಿಕ ಭೇಟಿಯಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರೆಸ್ ಸಿಬ್ಬಂದಿ ಮಾರ್ಗದರ್ಶನ ನೀಡಿದರು. ಪ್ರಾಯೋಗಿಕ ಜ್ಞಾನ ವೃದ್ಧಿಸುವ ಇಂತಹ ಶೈಕ್ಷಣಿಕ ಪ್ರವಾಸಗಳು ಭವಿಷ್ಯದ ಅಧ್ಯಯನ ಹಾಗೂ ವೃತ್ತಿ ಆಯ್ಕೆಗೆ ಸಹಕಾರಿಯಾಗಲಿವೆ.
— ನದೀಂ ಖಾನ್ ವಿದ್ಯಾರ್ಥಿ