ಕೊಳವಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ 2026ನೇ ಸಾಲಿನ ವಿಜಯವಾಣಿ ಕ್ಯಾಲೆಂಡರ್ ಅನ್ನು ಸುರೇಶ್ ಸನದಿ ಬಿಡುಗಡೆ ಮಾಡಿದರು. ಕರೆಪ್ಪ ಬಡಿಗವಾಡ, ಶಂಕರ ವಣಕಿ ಇತರರಿದ್ದರು. 
ಬೆಳಗಾವಿ

ವಿಜಯವಾಣಿ ಕಳಕಳಿ ಶ್ಲಾಘನೀಯ

ರಾಘವೇಂದ್ರಗೌಡ ಭೀ ಪಾಟೀಲ್
ಸಮೀಪದ ಕೊಳವಿ ಗ್ರಾಮದ ಗ್ರಾಪಂ ಆವರಣದಲ್ಲಿ ಶುಕ್ರವಾರ ವಿಜಯವಾಣಿ ಪತ್ರಿಕೆಯ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ವಿಜಯವಾಣಿ ಪತ್ರಿಕೆ ಪ್ರತಿ ವರ್ಷ ಅಚ್ಚುಕಟ್ಟಾಗಿ ಮುದ್ರಣಗೊಳ್ಳುತ್ತಿದ್ದು, ಪಂಚಾಂಗ ಸೇರಿ ಅನೇಕ ಮಾಹಿತಿ ಒಳಗೊಂಡಿರುತ್ತದೆ ಎಂದರು. ಗ್ರಾಪಂ ಅಧ್ಯಕ್ಷ ಕರೆಪ್ಪ ಬಡಿಗವಾಡ ಮಾತನಾಡಿದರು.
ಸ್ಥಳೀಯ ಪತ್ರಿಕೆಯ ವಿತರಕರಾದ ಸಂಗಮೇಶ ಅಂಗಡಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಶಂಕರ ವಣಕಿ, ಶಿವಾನಂದ ಮಮದಾಪುರ, ರಾಮಣ್ಣ ಖಾನಾಪುರ, ಶಿವಪುತ್ರಪ್ಪ ಕಿಚಡಿ, ಅಡಿವೆಪ್ಪ ಅಂಗಡಿ, ಮಾರುತಿ ಹಂಜಿ, ಭೀಮಸಿ ಕೊತ್ತಲ, ಅಡಿವೆಪ್ಪ ಬೊಮ್ಮನ್ನವರ, ಮಹಾದೇವ ಹಟ್ಟಿಗೌಡರ, ಕೆ.ವೈ.ತಳವಾರ, ಅಪ್ಪಣ್ಣ ಜನಕಟ್ಟಿ ಇತರರಿದ್ದರು.