ಮಕ್ಕಳಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಜಯವಾಣಿ ‘ವಿದ್ಯಾರ್ಥಿ ಉದ್ಯೋಗ ಮಿತ್ರ’ ಸಂಚಿಕೆ ವಿತರಿಸಲಾಯಿತು. ಎಸ್.ವಿ.ಕುಲಕರ್ಣಿ, ಬಸವರಾಜ ದಂಡಿನ, ಎಸ್.ಜಿ.ವಲ್ಯಾಪುರ, ರಮೇಶ ಬಚ್ಚನವರ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳ ಜ್ಞಾನಭಂಡಾರ ವಿಜಯವಾಣಿ

ಕೈಗೆಟಕುವ ದರದಲ್ಲಿ ಜನರಿಗೆ ಗುಣಮಟ್ಟದ ಪತ್ರಿಕೆ ನೀಡುತ್ತಿರುವ ಡಾ.ವಿಜಯ ಸಂಕೇಶ್ವರ ಕಾರ್ಯ ಶ್ಲಾಘನೀಯ. ವಿಜಯವಾಣಿ ವಿದ್ಯಾರ್ಥಿಗಳ ಪಾಲಿನ ಜ್ಞಾನಭಂಡಾರವಾಗಿದೆ ಎಂದು ಗೋಕಾಕ ಶೈಕ್ಷಣಿಕ ವಲಯ ಸಮನ್ವಯಾಧಿಕಾರಿ ಎಸ್.ವಿ.ಕುಲಕರ್ಣಿ ಹೇಳಿದರು.
ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಉಚಿತವಾಗಿ ಕೊಡಮಾಡಿದ ವಿಜಯವಾಣಿ ‘ವಿದ್ಯಾರ್ಥಿ ಉದ್ಯೋಗ ಮಿತ್ರ’ ಸಂಚಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕ ಎಸ್.ಜಿ.ವಲ್ಯಾಪುರ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸದುದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಟಿ.ಆರ್.ಕಾಗಲ್ ಪತ್ರಿಕೆ ವಿತರಿಸುತ್ತಿದ್ದಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ರಮೇಶ ಬಚ್ಚನವರ, ರವೀಂದ್ರ ನಂದಗಾಂವ, ಕೆಂಚಪ್ಪ ಮಾಳೇದ, ಗಿರಿಮಲ್ಲಪ್ಪ ದುರದುಂಡಿ, ಶಿಕ್ಷಕರಾದ ಆರ್.ಎಂ.ಗುಡ್ಡನ್ನವರ, ಎಸ್.ಡಿ.ಹಡಗಿನಾಳ, ಜಿ.ಎಸ್. ಪೊಲೀಸ್, ವಿ.ಎಸ್.ಕಟಗಿ, ಆರ್.ಎಸ್.ಶಿವಾಪುರ, ಎಸ್.ಐ.ಬಂಗಾರಿ, ಎಂ.ಎಂ.ದಂಡಿನ ಇತರರಿದ್ದರು. ಎಂ.ಎಂ.ಗಾಣಗಿ ನಿರೂಪಿಸಿದರು.