ನಿಡಸೋಸಿ ಗ್ರಾಮದ ಜನಸಂಪರ್ಕ ಸಭೆಯಲ್ಲಿ ಶಾಸಕ ನಿಖಿಲ ಕತ್ತಿ ಮಾತನಾಡಿದರು. ಮಹಾವೀರ ನಿಲಜಗಿ, ದುಂಡಪ್ಪ ಹೆದ್ದೂರಿ, ಗುರುರಾಜ ಕುಲಕರ್ಣಿ ಇತರರಿದ್ದರು.
ನಿಡಸೋಸಿ, ಕೇಸ್ತಿ, ಅಮ್ಮಣಗಿ, ಹಂದಿಗೂಡ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಮಾತನಾಡಿ, ಸರ್ಕಾರ ನೀಡುತ್ತಿರುವ ಅನುದಾನ ಬಳಸಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದ್ದರೂ ಜನರ ನಿರೀಕ್ಷೆ ಹಾಗೂ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿ ನಡೆಯುತ್ತಿಲ್ಲ. ಲಭ್ಯವಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜನರ ಬಹುದಿನಗಳ ಬೇಡಿಕೆಯಂತೆ ನಿಡಸೋಸಿಯಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯ ಮಂಜೂರಾಗಿದ್ದು, ಶೀಘ್ರದಲ್ಲಿ ಆರಂಭಿಸಲಾಗುವುದು. ನಿಡಸೋಸಿ ಸರ್ಕಾರಿ ಹೆಣ್ಣುಮಕ್ಕಳ ಶಾಲೆ ಮುಖ್ಯಶಿಕ್ಷಕಿ ವರ್ಗಾಯಿಸುವಂತೆ ಸ್ಥಳೀಯರ ಬೇಡಿಕೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ದುಂಡಪ್ಪ ಹೆದ್ದೂರಿ, ಗುರುರಾಜ ಕುಲಕರ್ಣಿ, ಗಜಾನನ ಕ್ವಳ್ಳಿ, ಸುನೀಲ ಪರ್ವತರಾವ, ಶಿವಾನಂದ ಮುಡಸಿ, ಬಸವಣ್ಣಿ ನಾಗನೂರಿ, ಪ್ರಶಾಂತ ಪಾಟೀಲ, ಲೋಕೋಪಯೋಗಿ ಇಲಾಖೆ ಎಇಇ ಪ್ರವೀಣ ಮಾಡ್ಯಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಇತರರಿದ್ದರು.