ಸೊಲ್ಲಾಪುರದಲ್ಲಿ ಅಣ್ಣಾಸಾಹೇಬ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ಬಸವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವಿನಾಶ ಭೋಸಿಕರ, ಬಸವರಾಜ ತಂಬಾಕೆ, ಚನ್ನವೀರ ಭದ್ರೇಶ್ವರಮಠ, ರಾಜಶೇಖರ ಬುರಕುಲೆ ಇತರರಿದ್ದರು. 
ಬೆಳಗಾವಿ

ವಚನಗಳು ಜೀವನಕ್ಕೆ ದಾರಿದೀಪ

ಪ್ರಶಾಂತ ಹೂಗಾರ
ಚಿಕ್ಕೋಡಿ: ಜಗಜ್ಯೋತಿ ಬಸವೇಶ್ವರರು ಮತ್ತು ಶರಣರ ವಚನಗಳು ಜೀವನಕ್ಕೆ ದಾರಿದೀಪ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಸವ ಬ್ರಿಗೇಡ್ ಹಾಗೂ ಜಿಲ್ಲಾ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬಸವರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಬಸವರತ್ನ ಪ್ರಶಸ್ತಿ ನೀಡಿದ ಬಸವ ಬ್ರಿಗೇಡ್ ಘಟಕಕ್ಕೆ ಕೃತಜ್ಞತೆ ಸಲ್ಲಿಸಿದರು. ಬಸವ ಬ್ರಿಗೇಡ್ ಅಧ್ಯಕ್ಷ ಅವಿನಾಶ ಭೋಸಿಕರ, ಬಸವರಾಜ ತಂಬಾಕೆ, ಚನ್ನವೀರ ಭದ್ರೇಶ್ವರಮಠ, ರಾಜಶೇಖರ ಬುರಕುಲೆ, ರಾಹುಲ ಬಿರಾಜದಾರ, ಮಹೇಂದ್ರ ಬಾಕಳೆ, ಶ್ಯಾಮಧುರಿ, ಅಕ್ಷಯ ಮನೀಷ, ವಿ.ಎನ್. ಜಾಮಗೊಂಡ, ಶಿವಶಂಕರ ಕಡಾದಿ, ಶ್ರೀಶೈಲ ಹತ್ತೂರೆ, ಅಮರ ಪಾಟೀಲ, ಕಿರಣ ದೇಶಮುಖ, ಸಂತೋಷ ಪವಾರ ಇತರರಿದ್ದರು.