ನೇರಲಿ ಗ್ರಾಮಸ್ಥರು ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸನ್ಮಾನಿಸಿದರು. ಮಹಾವೀರ ನಿಲಜಗಿ, ನಿಲೇಶ ಜಾಧವ, ಈಶ್ವರ ಖೋತ ಇತರರಿದ್ದರು. 
ಬೆಳಗಾವಿ

ವಿದ್ಯುತ್ ಬಳಕೆ ಸಮರ್ಪಕವಾಗಿರಲಿ

ಪ್ರಶಾಂತ ಹೂಗಾರ
ಹುಕ್ಕೇರಿ: ಗ್ರಾಮೀಣ ಪ್ರದೇಶದಲ್ಲಿ ನಿರಂತರ ವಿದ್ಯುತ್ ಪೂರೈಸಲಾಗುತ್ತಿದ್ದು, ಎಲ್ಲರೂ ಸಮರ್ಪಕವಾಗಿ ಬಳಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ತಾಲೂಕಿನ ನೇರಲಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಟಿಸಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ತೋಟಪಟ್ಟಿ ನಿವಾಸಿಗಳಿಗೂ ನಿರಂತರ ವಿದ್ಯುತ್ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ಗ್ರಾಹಕರು ವಿದ್ಯುತ್ ಬಾಕಿ ಬಿಲ್ ಸಂದಾಯ ಮಾಡಬೇಕು ಎಂದರು. ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಸಂಘದ ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪುರೆ, ಗ್ರಾಪಂ ಅಧ್ಯಕ್ಷ ನಿಲೇಶ ಜಾಧವ, ಪಿಕೆಪಿಎಸ್ ಅಧ್ಯಕ್ಷ ರುದ್ರಪ್ಪ ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ, ಮುಖಂಡರಾದ ಈಶ್ವರ ಖೋತ, ಎಸ್.ಕೆ.ಹುಕ್ಕೇರಿ, ನಾಗೇಶ ಪಾಟೀಲ, ವಿನಾಯಕ ಸಂಕೇಶ್ವರಿ, ಅನಿಲ ಪಾಟೀಲ, ಈರಪ್ಪ ಲಬ್ಬಿ,
ಎಸ್.ಆರ್.ಪಾಟೀಲ, ಆಕಾಶ ಗುರವ, ಸಂಜಯ ಹೊಸಮನಿ ಇತರರಿದ್ದರು.