ಬೆಳಗಾವಿ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರೀಯ ತಂತ್ರಜ್ಞಾನ ದಿನಾಚಾರಣೆ ಕಾರ್ಯಕ್ರಮದಲ್ಲಿ ಡಾ.ಕುಲದೀಪ ಸಾಂಬ್ರೇಕರ ಅವರನ್ನು ಪ್ರೊ.ರೋಹಿತ ದೇಶಪಾಂಡೆ ಸ್ವಾಗತಿಕೊಂಡರು.ಡಾ.ಪ್ರವೀಣ ದೇವಾಂಗದ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನವ ಯುಗದ ಸವಾಲಗಳನ್ನು ಎದುರಿಸಲು ನಾವೀನ್ಯತೆಯಿಂದ ಕೂಡಿದ ಸಂಶೋಧನೆ ಮತ್ತು ಉದ್ಯಮಶೀಲತೆಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಜಿಐಟಿ ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ.ಕುಲದೀಪ ಸಾಂಬ್ರೇಕರ ಕರೆ ನೀಡಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಈಚೆಗೆ ಬಿಸಿಎ ವಿಭಾಗದಿಂದ ರಾಷ್ಟ್ರೀಯ ತಂತ್ರಜ್ಞಾನ ದಿನಾಚಾರಣೆ ಅಂಗವಾಗಿ ಆಯೋಜಿದ್ದ ಅಂತರ್ಗತ ಬೆಳವಣಿಗೆ ಜವಾಬ್ದಾರಿಯುತ ನಾವೀನ್ಯತೆ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಲಿಕೆ ಮತ್ತು ಡಿಜಿಟಲ್ ರೂಪಾಂತರದಂತಹ ಉದಯೋನ್ಮುಖ ತಂತ್ರಜ್ಞಾನಗಳು ನೈತಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಿದಾಗ ದೇಶದ ಅಭಿವೃದ್ಧಿ ಸಾಧ್ಯ.ಇದು ಸಮಾಜದ ಮೇಲೆ ಹೇಗೆ ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದರು.
ಬಿಸಿಎ ಸಂಯೋಜಕ ಪ್ರೊ.ರೋಹಿತ ದೇಶಪಾಂಡೆ ಮಾತನಾಡಿ ಇಂದಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿರುವ ಅನೇಕ ಅವಕಾಶಗಳನ್ನು ಸ್ವೀಕರಿಸಿ ಸವಾಲುಗಳನ್ನು ಎದುರಿಸಬೇಕೆಂದರು.
ಐಐಸಿ ಸಂಯೋಜಕಿ ಪ್ರೊ.ಪಲ್ಲವಿ ಮುಧೋಳ,ಸಂಚಾಲಕ ಡಾ.ಪ್ರವೀಣ ದೇವಾಂಗದ ಇತರರಿದ್ದರು.