ಬೈಲಹೊಂಗಲದ ಹಜರತ್ ಹಾಫೀಜ್ ಬರೀ ಷಾ ವಲಿ ದರ್ಗಾದ ಸಂದಲ್ ಮತ್ತು ಉರುಸ್ ಕಾರ್ಯಕ್ರಮದಲ್ಲಿ ಮಹಾನ್ ಸೂಫಿ ಸಂತರು, ಮಲಂಗ ಬಾಬಾಗಳನ್ನು ಸತ್ಕರಿಸಲಾಯಿತು. ಸೂಫಿ ಕಾಸೀಂ ಷಾ ಖಾದ್ರಿ ವ ಹಾಸ್ಮಿ ಇತರರಿದ್ದರು.
ಬೈಲಹೊಂಗಲ: ನಗರದ ದೊಡ್ಡಕೆರೆಯ ಪಕ್ಕದಲ್ಲಿರುವ ಹಿಂದೂ-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿರುವ ಹಜರತ್ ಸೈಯ್ಯದ್ ಹಾಫೀಜ್ ಬರೀ ಷಾವಲಿ ಪವಿತ್ರ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಅಹಲೆ ಸುನ್ನತವಲ್ ಜಮಾತದಿಂದ ಗುರುವಾರ ಸಂಭ್ರಮದಿಂದ ಜರುಗಿತು.
ಹಜರತ್ ಹಾಫೀಜ್ ಬರೀ ಷಾ ವಲಿ ದರ್ಗಾವು ಹಲವು ದಶಕಗಳಿಂದ ಹಿಂದೂ-ಮುಸ್ಲಿಂ ಸೌಹಾರ್ದದ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಉರುಸ್ ಮಹೋತ್ಸವದಲ್ಲಿ ಎಲ್ಲ ಸಮುದಾಯದವರು ಭಾಗವಹಿಸುವುದು ವಿಶೇಷವಾಗಿದೆ. ಪವಿತ್ರ ಹಜ್ ಯಾತ್ರೆ ಕೈಗೊಂಡಿದ್ದ ಹಾಜಿಗಳನ್ನು ಹಾಗೂ ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳನ್ನವರ ಅವರನ್ನು ಸನ್ಮಾನಿಸಲಾಯಿತು.
ಕಾದ್ರೊಳ್ಳಿಯ ಸೂಫಿ ಕಾಸೀಂ ಷಾ ಖಾದ್ರಿ ವ ಹಾಸ್ಮಿ, ಧಾರವಾಡ ಸತ್ತೂರಿನ ಸೂಫಿ ಸಂತ ಅಬ್ದುಲ್‌ರಜಾಕ್ ಖಾದ್ರಿ, ಮಾಜಿ ಬಾಬಾ, ಹಿಟ್ನಿಯ ಮೌಲಾನಾ ಅಬ್ದುಲ್‌ಸಮದ್, ಹೊಸೂರಿನ ಹಾಫೀಜ್ ಮಹಮ್ಮದ್ ಅಲಿ, ನ್ಯಾಮತಲಿ ಮಕಾನದಾರ, ಲತೀ-ಪೀರಾ ತೊಲಗಿ, ಇಮ್ತಿಯಾಜ್ ಗೋವೆ, ಗೌಸ್ ಮುಲ್ಲಾ, ಬಾಬುಸಾಬ್ ಸುತಗಟ್ಟಿ, ರಫೀಕ್ ಬಡೇಘರ, ಇಸ್ಮಾಯಿಲ್ ಬಡೇಘರ್, ಇರ್ಫಾನ್ ಬಾಟಲಿವಾಲೆ, ನಿಜಾಮ್‌ಗುರ್ಲಹೊಸೂರ, ಸುಭಾನಿ ಸೈಯ್ಯದ್, ತೌಸೀಫ್ ಅತ್ತಾರ ಇತರರಿದ್ದರು.