ಬೆಳಗಾವಿ ತಾಲೂಕಿನ ಅಂಬೇವಾಡಿಯಲ್ಲಿ ಶನಿವಾರ ಜರುಗಿದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಯುವರಾಜ ಕದಂ, ಮೃಣಲಾ ಹೆಬ್ಬಾಳ್ಕರ, ಶಿವಾಜಿ ಹಂಡೆ, ಶ್ರೀಕಾಂತ ದೇಸಾಯಿ ಇತರರು ಪಾಲ್ಗೊಂಡಿದ್ದರು.  
ಬೆಳಗಾವಿ

ಛತ್ರಪತಿ ಶಿವಾಜಿ ಅಪ್ರತಿಮ ನಾಯಕ

ಬೆಳಗಾವಿ: ಶಿವಾಜಿ ಮಹಾರಾಜರು ಖಡ್ಗದಿಂದ ಮಾತ್ರ ರಾಜ್ಯ ಕಟ್ಟಲಿಲ್ಲ, ಅವರು ನ್ಯಾಯ, ಶಿಸ್ತು, ಜನರ ಮೇಲಿನ ಪ್ರೀತಿಯಿಂದ ಸಾಮ್ರಾಜ್ಯ ನಿರ್ಮಿಸಿದರು. ಮಹಿಳೆಯರ ಗೌರವವನ್ನು ರಕ್ಷಿಸಿದ ಮೊದಲ ಆಡಳಿತಗಾರರಲ್ಲಿ ಶಿವಾಜಿ ಮಹಾರಾಜರು ಪ್ರಮುಖರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಶತ್ರುವಿನ ಕೋಟೆ ಗೆದ್ದರೂ ಪರಸ್ತ್ರೀಯರನ್ನು ಕಣ್ಣೆತ್ತಿ ನೋಡದ ಸಂಸ್ಕಾರವುಳ್ಳ ಶಿವಾಜಿ, ನಿಜವಾದ ವೀರತ್ವವುಳ್ಳವರು. ರಾಜನಾಗಿ ಅಲ್ಲದದೇ ನ್ಯಾಯವಂತನಾಗಿದ್ದರಿಂದ ಇತಿಹಾಸ ಪುಟ ಸೇರಿದರು ಎಂದು ಬಣ್ಣಿಸಿದರು.
ಕಾಡಾ ಅಧ್ಯಕ್ಷ ಯುವರಾಜ ಕದಂ, ಮೃಣಾಲ ಹೆಬ್ಬಾಳ್ಕರ್, ಬಾಳು ದೇಸೂರಕರ, ಶಿವಾಜಿ ಅತವಾಡ್ಕರ, ಪ್ರಕಾಶ ಗೋಪೆ, ಸುನೀಲ ರಕ್ಷೆ, ರಮೇಶ ರೆಡೆಕರ, ಜಯವಂತ ಬಾಳೇಕುಂದ್ರಿ, ಶಿವಾಜಿ ಹಂಡೆ, ಮಥುರಾ ತೆರಸೆ, ಶ್ರೀಕಾಂತ ದೇಸಾಯಿ, ಲಕ್ಷ್ಮೀ ಯಳಗುರಕರ, ಬಾಲಕೃಷ್ಣ ತೆರಸೆ, ತಾನಾಜಿ ಅತವಾಡ್ಕರ, ಅನಂತ ತುಡೇಕರ, ಪಿ.ಕೆ.ತೆಳ್ಳಿ, ವಿನಾಯಕ ಕಾತಕರ, ಅಮೂಲ ಬಾತಖಾಂಡೆ ಇತರರಿದ್ದರು.
----