ಹಳೇ ಪಿಬಿ ರಸ್ತೆಯಿಂದ ಬ್ಯಾಂಕ್ ಆಫ್ ಇಂಡಿಯಾ ವೃತ್ತದ ವರೆಗಿನ ರಸ್ತೆ ಬಂದ್ ಆಗಿರುವುದು. 
ಬೆಳಗಾವಿ

ಬಗೆಹರಿಯದ ಸಂಚಾರ ಸಂಕಷ್ಟ!

ಧರ್ಮರಾಜ ರಾಮನಗೌಡ ಪಾಟೀಲ
ಬೆಳಗಾವಿ: ಇಲ್ಲಿನ ಹಳೇ ಪಿಬಿ ರಸ್ತೆಯಿಂದ ಬ್ಯಾಂಕ್ ಆಫ್ ಇಂಡಿಯಾ ವೃತ್ತದವರೆಗಿನ ರಸ್ತೆ ಸಂಚಾರ ಬಂದ್ ಆಗಿರುವುದರಿಂದ ವಾಹನ ಸವಾರರು, ವ್ಯಾಪಾರಿಗಳು, ಉದ್ಯಮಿದಾರರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಅಗಲೀಕರಣಕ್ಕೆ ಮಹಾನಗರ ಪಾಲಿಕೆ ಭೂಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ಪರಿಹಾರ ನೀಡಲು ಪಾಲಿಕೆ ನಿರ್ಲಕ್ಷ್ಯ ವಹಿಸಿದ್ದರಿಂದ ಉದ್ಭವಿಸಿದ ಸಮಸ್ಯೆ ಇಂದಿಗೂ ಮುಂದುವರಿದಿದೆ.
ಎರಡು ವರ್ಷದಿಂದ ಈ ಮಾರ್ಗ ಬಂದ್ ಮಾಡಿದ್ದರಿಂದ ನಗರದ ವಿವಿಧ ಭಾಗಗಳಲ್ಲಿ ರಸ್ತೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ವ್ಯಾಪಾರ-ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ನಿರೀಕ್ಷಿತ ಆದಾಯ ಬಾರದ್ದಕ್ಕೆ ವ್ಯಾಪಾರಿಗಳು, ಅಂಗಡಿಕಾರರು ಬೇರೆ ಕಡೆ ಹೋಗುತ್ತಿದ್ದಾರೆ. ಸಮಸ್ಯೆ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸ್ವಾಧೀನಪಡಿಸಿಕೊಂಡ ಆಸ್ತಿಗೆ 20 ಕೋಟಿ ರೂ. ಪರಿಹಾರ ನೀಡಲು 2021ರಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಪತ್ರ ಬರೆದಿದ್ದರು. ಆದರೆ, ಸರ್ಕಾರವು 2022ರಲ್ಲಿ ಪಾಲಿಕೆಯಿಂದಲೇ ಭೂ ಪರಿಹಾರ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿತ್ತು.
ಆದರೆ, ಆರ್ಥಿಕ ಸಮಸ್ಯೆ ನೆಪವೊಡ್ಡಿ ಪರಿಹಾರ ನೀಡಲು ಪಾಲಿಕೆ ವಿಳಂಬ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮಾಲೀಕರು ಪರಿಹಾರ ನೀಡುವವರೆಗೆ ರಸ್ತೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಬಂದ್ ಮಾಡಿದ್ದಾರೆ.
ಆಡಳಿತ ಸಂಪೂರ್ಣ ವಿಫಲ: ಭೂಸ್ವಾಧೀನಕ್ಕೆ ಪರಿಹಾರ ನೀಡುವ ಕುರಿತು ಮಹಾನಗರ ಪಾಲಿಕೆಯಲ್ಲಿ ಹಲವಾರು ಬಾರಿ ಸಭೆ ನಡೆಸಿದ್ದರೂ ಲಪ್ರದವಾಗಿಲ್ಲ. ಇದಕ್ಕೆ ಆಡಳಿತಾರೂಢ ಸದಸ್ಯರು, ಬೆಳಗಾವಿ ದಕ್ಷಿಣ, ಉತ್ತರ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ ಎಂದು ಪಾಲಿಕೆಯ ಪ್ರತಿಪಕ್ಷದ ಸದಸ್ಯರು ದೂರಿದ್ದಾರೆ.
"

ಸ್ಮಾರ್ಟ್ ಸಿಟಿ ಯೋಜನೆ ಯಡಿ ನಿರ್ಮಿಸಿ ರುವ ಹಳೇ ಪಿಬಿ ರಸ್ತೆಯಿಂದ ಬ್ಯಾಂಕ್ ಆಫ್ ಇಂಡಿಯಾ ವೃತ್ತದವರೆಗಿನ ರಸ್ತೆ ಸಮಸ್ಯೆ ಕುರಿತು ಪರಿಷತ್ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ, ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ವಿಷಯವಾಗಿ ಸರ್ಕಾರದಿಂದಲೇ ಸೂಕ್ತ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ.