ಸುಲಧಾಳದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಡಾ.ಅಮರಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ರಮೇಶ ಜಾರಕಿಹೊಳಿ, ಜಿ.ಬಿ.ಬಳಗಾರ ಇತರರಿದ್ದರು. 
ಬೆಳಗಾವಿ

ಒಗ್ಗಟ್ಟಿನಿಂದ ಹಳ್ಳಿಗಳ ಸುಧಾರಣೆ ಸಾಧ್ಯ

ರಾಘವೇಂದ್ರಗೌಡ ಭೀ ಪಾಟೀಲ್
ಸಮೀಪದ ಸುಲಧಾಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜಡಿಸಿದ್ಧೇಶ್ವರ ಮಠದ ರಸ್ತೆ ವಿಸ್ತರಣೆ ಕೋರಿಕೆ ಶೀಘ್ರ ಈಡೇರಿಸಲಾಗುವುದು ಎಂದರು.
ಡಾ.ಅಮರಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಅಂಕಲಗಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಸೌಲಭ್ಯಗಳು ತಾಲೂಕು ಆಸ್ಪತ್ರೆಗಳಿಗಿಂತ ಅಧಿಕವಾಗಿವೆ. ಇದು ರಮೇಶ ಜಾರಕಿಹೊಳಿ ಹಳ್ಳಿಗಳಲ್ಲಿ ಕೈಗೊಂಡ ಅಭಿವೃದ್ಧಿ ಮತ್ತು ಜನಪರ ಸೇವೆ ಎತ್ತಿ ತೋರಿಸುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಧುರೀಣರಾದ ಬಾಳಗೌಡ ಪಾಟೀಲ, ಮಾರುತಿ ಗೋಡಲಕುಂದರಗಿ, ಈಶ್ವರ ಮುತ್ನಾಳ, ಜಡಿಸಿದ್ಧೇಶ್ವರ ಮಠದ ರುದ್ರಯ್ಯ ಸ್ವಾಮೀಜಿ, ಭೀಮಗೌಡ ಪೊಲೀಸಗೌಡರ, ಸೋಮಲಿಂಗ ಪಾಟೀಲ, ಎ.ಬಿ.ಮಲಬನ್ನವರ, ಲಕ್ಕಪ್ಪ ಗಸ್ತಿ, ರಾಜೇಂದ್ರ ಗೌಡಪ್ಪಗೋಳ, ಬಸನಗೌಡ ನಿರ್ವಾಣಿ, ವಿರೂಪಾಕ್ಷ ಅಂಗಡಿ, ಅಡಿವೆಪ್ಪ ನಾವಲಗಟ್ಟಿ, ಲಕ್ಕಪ್ಪ ಕಮತಗಿ, ಗಂಗಪ್ಪ ಮಾರಿಹಾಳ, ಸತ್ತಿಗೌಡ ಪಾಟೀಲ, ಗಂಗಪ್ಪ ಅಂಗಡಿ, ಆನಂದ ಅತ್ತುಗೋಳ ಇತರರಿದ್ದರು.ಪ್ರೋ.ಬಿ.ಎಂ.ಕೊಳವಿ ಸ್ವಾಗತಿಸಿದರು. ಸುರೇಶ ಬೆಟಗೇರಿ ನಿರೂಪಿಸಿದರು.