ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶ್ರೀಧರ ಸ್ವಾಮಿ, ಡಾ.ಸುನಂದಾ ಕಳಕಣ್ಣವರ, ಅಭಿನವ ವೆಂಕಟೇಶ್ವರ ಮಹಾರಾಜರು, ಪ್ರಕಾಶ ಆಪ್ಟೆ ಇತರರಿದ್ದರು. 
ಬೆಳಗಾವಿ

ಹಿಂದೂಗಳಲ್ಲಿ ಒಗ್ಗಟ್ಟು ಅಗತ್ಯ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಶ್ರೀಧರ ಸ್ವಾಮಿ ಅಭಿಮತ
  • ಭಾರತೀಯರ ರಕ್ಷಣೆಗೆ ಆರ್‌ಎಸ್‌ಎಸ್ ಬದ್ಧ
ರಾಮದುರ್ಗ: ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿರುವ ಹಿಂದೂಗಳ ಒಗ್ಗಟ್ಟನ್ನು ಭೇದಿಸಲು ದುಷ್ಟಶಕ್ತಿಗಳು ಶತಮಾನಗಳಿಂದ ಪ್ರಯತ್ನಿಸುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಶ್ರೀಧರ ಸ್ವಾಮಿ ಹೇಳಿದರು.
ನಗರದ ತೇರಬಜಾರದಲ್ಲಿ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತೀಯರ ರಕ್ಷಣೆಗೆ ಆರ್‌ಎಸ್‌ಎಸ್ ಬದ್ಧ. ಉಪ ಜಾತಿಗಳು ಬೇರೆಯಾದರೂ ನಾವೆಲ್ಲರೂ ಒಂದು ಎಂಬ ಪರಿಕಲ್ಪನೆಯೊಂದಿಗೆ ಅಖಂಡ ಹಿಂದೂಗಳು ಒಂದಾಗಬೇಕು. ಇಲ್ಲದಿದ್ದಲ್ಲಿ ನಮ್ಮನ್ನು ನಿರ್ಮೂಲಿಸುವ ಕಾಲ ದೂರವಿಲ್ಲ ಎಂದರು.
ಲಘು ಉದ್ಯೋಗ ಭಾರತಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಡಾ.ಸುನಂದಾ ಕಳಕಣ್ಣವರ ಮಾತನಾಡಿ, ಧರ್ಮದ ಉಳಿವಿಗೆ ಸಂಘಟಿತ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ತೊಂಡಿಕಟ್ಟಿಯ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ವೈದ್ಯ ಪ್ರಕಾಶ ಆಪ್ಟೆ ಮಾತನಾಡಿದರು. ಆರ್‌ಎಸ್‌ಎಸ್ ಸೇವಕರು, ಸ್ವಾಗತ ಸಮಿತಿ ಪದಾಽಕಾರಿಗಳು, ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಇತರರಿದ್ದರು.