ಜಿಲ್ಲೆ ವಿಭಜನೆ ನಿರೀಕ್ಷೆಯಲ್ಲಿದ್ದ ಬೆಳಗಾವಿ ಜನತೆಗೆ ನಿರಾಸೆಯಾಗಿದೆ. ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಹೊಸ ಜಿಲ್ಲೆ ಘೋಷಣೆಯ ಖಚಿತ ಭರವಸೆಯೂ ಕೈಗೂಡಲಿಲ್ಲ.
ಬೆಳಗಾವಿಗೆ ಬಂದಾಗ ಸರ್ವ ಪಕ್ಷದ ಶಾಸಕರ ಸಭೆ ನಡೆಸಿ, ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಆಶ್ವಾಸನೆ ಹುಸಿಯಾಗಿದೆ. ಹತ್ತು ದಿನಗಳ ಅಧಿವೇಶನದಲ್ಲಿ ಜಿಲ್ಲೆ ವಿಭಜನೆ ಪ್ರಸ್ತಾಪ ಚರ್ಚೆಗೆ ಬರಲೇ ಇಲ್ಲ. ಕೊನೇಗೂ ಜಿಲ್ಲೆ ವಿಭಜನೆ ನಿರ್ಧಾರದಿಂದ ಸಿಎಂ ಸಿದ್ದರಾಮಯ್ಯ ಹಿಂದೆ ಸರಿದಿರುವುದು ಖಚಿತ ಎನ್ನುವಂತಾಗಿದೆ.
ಜೆ.ಎಚ್.ಪಟೇಲ್ ಸಿಎಂ ಆಗಿದ್ದ ಅವಧಿಯಲ್ಲಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆ ೋಷಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿ ತಿಂಗಳುಗಟ್ಟಲೇ ಹೋರಾಟಗಳು ನಡೆದಾಗ, ಆದೇಶ ವಾಪಸು ಪಡೆದಿದ್ದರು. ಅಂದಿನಿಂದಲೇ ಬೆಳಗಾವಿ ಜಿಲ್ಲ್ಲೆ ವಿಭಜನೆ ಜೇನುಗೂಡಾಗಿದೆ.
ಅಂದಿನಿಂದ ಯಾರೂ ಈ ಜೇನುಗೂಡಿಗೆ ಕೈ ಹಾಕುವ ಧೈರ್ಯ ಮಾಡಿರಲಿಲ್ಲವಾದರೂ, ಈ ಸಲ ಒಂದು ನಿರ್ಣಯ ಮಾಡುವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಹೆಚ್ಚಾದ ಹೋರಾಟಗಳು, ಸದನದಲ್ಲಿ ಉತ್ತರ ಕರ್ನಾಟಕದ ಬಗೆಗೆ ಹೆಚ್ಚಿದ ಚರ್ಚೆ, ಡಿನ್ನರ್ ಮೀಟಿಂಗ್, ಆರೋಗ್ಯ ಸಮಸ್ಯೆ ಸಿಎಂ ಹಿಂದೇಟು ಹಾಕಲು ಕಾರಣ ಎನ್ನಲಾಗಿದೆ.
ಅಧಿವೇಶನಕ್ಕೂ ಮುಂಚೆ ಸಿದ್ದರಾಮಯ್ಯ ಬೆಳಗಾವಿಗೆ ಬಂದಾಗ, ಶಾಸಕರ ಸಭೆ ನಡೆಸುವುದಾಗಿ ಹೇಳಿದ್ದಾರೆ ಎಂಬುದು ಬಹಿರಂಗವಾದಾಗ ಹೋರಾಟಗಳು ತೀವ್ರಗೊಂಡವು. ಅಧಿವೇಶನದ ವೇಳೆಯಲ್ಲಂತೂ ಗೋಕಾಕ, ಚಿಕ್ಕೋಡಿ ಜತೆಗೆ ಬೈಲಹೊಂಗಲ, ಸವದತ್ತಿ, ಅಥಣಿಯಲ್ಲೂ ಜಿಲ್ಲಾ ಕೇಂದ್ರ ೋಷಣೆಗೆ ಆಗ್ರಹಿಸಿ ಹೋರಾಟ ಚುರುಕಗೊಂಡಿತ್ತು.
ಹಲವೆಡೆ ಹೊಸ ತಾಲೂಕು ಹೋರಾಟಗಳು ಶುರುವಾದವು. ಕೆಲ ತಾಲೂಕಿನವರಂತೂ ಶಾಸಕರು, ಸ್ವಾಮೀಜಿಗಳ ಸಹಿತ ನಿಯೋಗದಲ್ಲಿ ಆಗಮಿಸಿ ಮುಖ್ಯಮಂತ್ರಿಯನ್ನು ಭೇಟಿಯಾದರು. ಇದರಿಂದ ಒತ್ತಡವೂ ಹೆಚ್ಚಾಯಿತು. ಇದು ಹೊಸ ವಿವಾದಕ್ಕೆ ಎಡೆಮಾಡಿಕೊಡಲಿದೆ ಎಂದರಿತ ಸಿಎಂ, ಸಭೆ ನಡೆಸುವ ನಿರ್ಣಯದಿಂದಲೇ ಹಿಂದೆ ಸರಿದರು ಎನ್ನಲಾಗುತ್ತಿದೆ.
ಬೆಳಗಾವಿಯನ್ನು ಎರಡು ಅಥವಾ ಮೂರು ಜಿಲ್ಲೆಯಾಗಿ ವಿಭಜಿಸುವ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿತ್ತು. ಅಧಿವೇಶನಕ್ಕೆ ಬಂದ ದಿನವೇ ನಮ್ಮ ಜತೆ ಚರ್ಚಿಸಿದ್ದರು. ಜಿಲ್ಲ್ಲೆ ವಿಭಜನೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಬಂದಿದ್ದರು. ಆದರೆ, ಅನೇಕರು ನಿಯೋಗದ ಮೂಲಕ ಅವರನ್ನು ಭೇಟಿಯಾಗಲು ಆರಂಭಿಸಿದರು. ಇದರಿಂದ ಅಳೆದು-ತೂಗಿ ಈ ಬಗ್ಗೆ ನಿರ್ಧರಿಸಬೇಕೆಂದು ಸಿಎಂ ವಿಚಾರ ಮಾಡಿದ್ದಾರೆ.