Two youths die in car accident 
ಬೆಳಗಾವಿ

ಕಾರ್​ ಅಪಘಾತದಲ್ಲಿ ಯುವಕರಿಬ್ಬರು ಸಾವು

ಪ್ರಮುಖ ಮುಖ್ಯಾಂಶಗಳು

  • Two youths die in car accident
ಬೈಲಹೊಂಗಲ: ನಗರದ ಇಬ್ಬರು ಯುವಕರು ಕಾರು ಅಪಘಾತದಲ್ಲಿ ಸಾವಿಗೀಡಾದ ಟನೆ ಚಿಕ್ಕಬಾಗೆವಾಡಿ ಹತ್ತಿರ ಬೈಲಹೊಂಗಲ&ಬೆಳಗಾವಿ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಇಲ್ಲಿನ ಟಿಪ್ಪು ನಗರದ ಜಯಬ್​ ಅಬ್ದುಲ್​ವದುದ ಕಿತ್ತೂರ (19), ಕಾಂಬಳೆ ಗಲ್ಲಿಯ ಕಾರು ಚಾಲಕ
ಅರ್ಷ ಅಬ್ದುಲ್​ರೆಹಮಾನ ಸವದತ್ತಿ (23) ಮೃತರು. ಇಬ್ಬರು ಕಾರಿನಲ್ಲಿ ಬೆಳಗಾವಿಗೆ ಬಂದು ಮರಳಿ ತಮ್ಮೂರಿನತ್ತ ಹೋಗುತ್ತಿದ್ದಾಗ ಅಪಘಾತವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೈಲಹೊಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.