ನಿಪ್ಪಾಣಿ: ದ್ವಿಚಕ್ರ ವಾಹನದಲ್ಲಿ 5.30 ಲಕ್ಷ ರೂ. ಮೌಲ್ಯದ 10.6 ಕೆಜಿ ಗಾಂಜಾ ಸಾಗಿಸುತ್ತಿದ್ದ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ತೊಕಾಯಿವಾಡಿಯ ಇಸಾಕ್ ಮೌಲಾ ಮದರಖಾನ್ (20), ಸೊಲ್ಲಾಪುರದ ಬಸವರಾಜ ಭಜಂತ್ರಿ (20) ಅವರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀಡಿ ಗೋದಾಮಿನ ಬಳಿ ಪೊಲೀಸರು
ಬಂಧಿತರಿಂದ ದ್ವಿಚಕ್ರ ವಾಹನ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಪ್ಪಾಣಿ ಶಹರ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ, ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಸ್.ಎಂ.ಕಾರಜೋಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.