ರಾಮದುರ್ಗದ ಸಿ.ಎಸ್.ಬೆಂಬಳಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಸಂಘಗಳ ಚಟುವಟಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಚ್.ಎಚ್.ನದಾಫ್, ಎಸ್.ಎಸ್.ಸುಲ್ತಾನಪುರ, ಪಿ.ಬಿ.ತೆಗ್ಗಿಹಳ್ಳಿ, ವಿ.ಜಿ.ಬೈಲವಾಡ ಇತರರಿದ್ದರು. 
ಬೆಳಗಾವಿ

ಯಾಂತ್ರಿಕ ಜೀವನ ಶೈಲಿಯಿಂದ ಸಂಪ್ರದಾಯ ದೂರ

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಡಾ.ಎಚ್.ಎಚ್.ನದಾಫ್ ಅಭಿಮತ
  • ವಿವಿಧ ಸಂಘಗಳ ಚಟುವಟಿಕೆ ಉದ್ಘಾಟನೆ

ರಾಮದುರ್ಗ: ಗ್ರಾಮೀಣ ಭಾಗದ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಜೀವನ ಪದ್ಧತಿ ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ಯುವ ಜನರು ಸಂಪ್ರದಾಯ, ಪರಂಪರೆ ಅನುಸರಿಸುವ ಮೂಲಕ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಎಚ್.ಎಚ್.ನದಾಫ್ ಹೇಳಿದರು.

ವಿದ್ಯಾ ಪ್ರಸಾರಕ ಸಮಿತಿಯ

ಸಿ.ಎಸ್.ಬೆಂಬಳಗಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಸಂಘಗಳ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯಾಂತ್ರಿಕ ಜೀವನ ಶೈಲಿಯಿಂದ ಗ್ರಾಮೀಣ ಕಲೆ, ಸಾಹಿತ್ಯ ಹಾಗೂ ಪೂರ್ವಜರ ರೂಢಿ-ಸಂಪ್ರದಾಯಗಳು ಮರೆಯಾಗುತ್ತಿವೆ. ಸಂಸ್ಕೃತಿ, ಪರಂಪರೆಗಳನ್ನು ಯುವ ಜನಾಂಗಕ್ಕೆ ಪರಿಚಯಿಸುವ ಜತೆಗೆ ಜಾಗೃತಿ ಮೂಡಿಸಬೇಕು ಎಂದರು.

ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್.ಎಸ್.ಸುಲ್ತಾನಪುರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ರಿಯಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಪ್ರ‍್ರೊ.ಎಸ್.ಎಂ.ಸಕ್ರಿ, ಪ್ರ‍್ರೊ.ಬಿ.ಬಿ.ವಂದಾಲ ಇತರರಿದ್ದರು. ಜಿಮಖಾನಾ ಉಪಾಧ್ಯಕ್ಷ ಎಸ್.ಬಿ.ಹಲ್ಯಾಳ ಪರಿಚಯಿಸಿದರು. ಎಸ್.ಎ.ಅಥಣಿ, ಮಂಜುಳಾ ಮೂಡ್ಲವರ ನಿರೂಪಿಸಿದರು.