- ಬಾಡಿಗೆ ಪಡೆದ ಟ್ರಾಕ್ಟರ್ ಮಾರಾಟ ಜಾಲ ಪತ್ತೆ
- ನಿಪ್ಪಾಣಿ ಪೊಲೀಸರಿಂದ ವಂಚಕರ ಬಂಧನ
- ಹದಿನೈದುಕ್ಕೂ ಅಧಿಕ ರೈತರಿಗೆ ಮೋಸ
ಬಾಡಿಗೆ ಪಡೆದ ಟ್ರಾಕ್ಟರ್ ಮಾರಾಟ ಜಾಲ ಪತ್ತೆ
| ಐವರು ಅಂತರ ರಾಜ್ಯ ವಂಚಕರ ಬಂಧನ | 8 ಟ್ರಾಕ್ಟರ್ ವಶಕ್ಕೆ
ಚಿಕ್ಕೋಡಿ: ಟ್ರಾಕ್ಟರ್‌ನಿಂದ ಜಾಲ ಬಾಡಿಗೆ ರೂಪದಲ್ಲಿ ಪಡೆದಿರುವ ಟ್ರಾಕ್ಟರ್ ಮಾರಾಟ ವಹಿವಾಟು ಅಂತರರಾಜ್ಯ ವಂಚಕರ ಪತ್ತೆ ಹಚ್ಚಿ, ಆರೋಪಿತರಿಂದ 8 ಟ್ರಾಕ್ಟರ್ ವಶಕ್ಕೆ ಪಡೆಯುವಲ್ಲಿ ಜಿಲ್ಲೆಯ ನಿಪ್ಪಾಣಿಯ ಬಸವೇಶ್ವರ ಚೌಕ್ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟçದ ಸಾತಾರ ಜಿಲ್ಲೆಯ ಜಾವಳಿ ತಾಲೂಕಿನ ಸರತಾಳೆ ಗ್ರಾಮದ ನಿವಾಸಿ ಅಜಯ್ ಸಂತೋಷ ಚೌವ್ಹಾಣ(೨೭) ಹಾಗೂ ಇನ್ನುಳಿದ ನಾಲ್ವರು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿತರು ನಿಪ್ಪಾಣಿ, ಚಿಕ್ಕೋಡಿ,ರಾಯಬಾಗ ಮತ್ತು ನೆರೆಯ ಕೊಲ್ಲಾಪುರ ಜಿಲ್ಲೆಯಲ್ಲಿ ರೈತರ ಬಳಿ ತಿಂಗಳಿಗೆ 30 ಸಾವಿರ ರೂ. ಬಾಡಿಗೆ ಹಣ ನೀಡುವುದಾಗಿ ನಂಬಿಸಿ, ಕರಾರು ಪತ್ರದಲ್ಲಿ ಸಹಿ ಮಾಡಿ ಟ್ರಾಕ್ಟರ್ ಪಡೆದು ಮೊದಲ ತಿಂಗಳ ಬಾಡಿಗೆ ನೀಡಿ,ನಂತರ ರೈತರ ಕೈಗೆ ಸಿಗದೆ, ಟ್ರಾಕ್ಟರ್ ಗಳನ್ನು ಮಹಾರಾಷ್ಟçದ ಪುಣೆ,ಸಾತಾರ, ನಾಶಿಕ ಜಿಲ್ಲೆಯಲ್ಲಿ ಮಾರಾಟ ಮಾಡಲಾಗಿದೆ.
ಬಂಧಿತರಿಂದ 8 ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ.