ಮುಗಳಖೋಡದಲ್ಲಿ ಸಾರ್ವಜನಿಕ ಶೌಚಗೃಹದ ತಡೆಗೋಡೆ ತೆರವುಗೊಳಿಸಿದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಪವಾಡಿಶೆಟ್ಟಿ ಹಾಗೂ ಸಿಬ್ಬಂದಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಮುಗಳಖೋಡ: ವಾರ್ಡ್ ನಂ.1 ಮತ್ತು 2ರ ಗಾಯರಾಣ ಜಾಗದಲ್ಲಿ ನಿರ್ಮಾಣ ಮಾಡಿದ್ದ ಸಾರ್ವಜನಿಕ ಶೌಚಗೃಹದ ತಡೆಗೋಡೆ ತೆರವುಗೊಳಿಸಿದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಪವಾಡಿಶೆಟ್ಟಿ ಹಾಗೂ ಸಿಬ್ಬಂದಿ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮುಖ್ಯಾಧಿಕಾರಿ ಮಹೇಂದ್ರ ಪವಾಡಿಶೆಟ್ಟಿ ಮಾತನಾಡಿ, ಶೌಚಗೃಹದ ತಡೆಗೋಡೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮರು ನಿರ್ಮಾಣ ಮಾಡುವಂತೆ ಮಹಿಳೆಯರು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳದ ಕುರಿತು ಮಾಹಿತಿ ಪಡೆದು ಪರಿಶೀಲಿಸಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ಜೂ.16ರಂದು ಪುರಸಭೆ ಸದಸ್ಯರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ತುರ್ತು ಸಭೆ ಕರೆದು ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.