ಸವದತ್ತಿ ನಗರದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಸಿದ್ಧರಾಮ ಟಿ., ಅರ್ಪಿತಾ ಬೆಲ್ಲದ, ಡಾ.ಶ್ರೀಪಾದ ಸಬನೀಸ, ಜೆ.ಬಿ.ಮುನವಳ್ಳಿ, ಎಂ.ಎಸ್.ಹುಬ್ಬಳ್ಳಿ ಇತರರಿದ್ದರು.
ಸವದತ್ತಿ: ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸಿದ್ಧರಾಮ ಟಿ. ಹೇಳಿದರು.
ವಕೀಲರ ಸಂಘದ ನೂತನ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಜೈಂಟ್ಸ್ ಗ್ರೂಪ್ ಸವದತ್ತಿ, ಜೈಂಟ್ಸ್ ಗ್ರೂಪ್ ಆಫ್ ರೇಣುಕಾ ಸಹೇಲಿ ಹಾಗೂ ಶಿವ ಸಂಜೀವಿನಿ ನೇತ್ರಾಲಯದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ, ಮಧುಮೇಹ ಹಾಗೂ ನೇತ್ರ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಟಿಎಚ್‌ಒ ಡಾ.ಶ್ರೀಪಾದ ಸಬನೀಸ ಮಾತನಾಡಿ, ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ಕಾಯಿಲೆ ದೂರವಿಡಬಹುದು. ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳು ಆರಂಭದಲ್ಲಿ ಲಕ್ಷಣರಹಿತವಾಗಿರುವುದರಿಂದ ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಜೆ.ಬಿ.ಮುನವಳ್ಳಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ, ಸಂಘದ ಉಪಾಧ್ಯಕ್ಷ ಎಂ.ಎಸ್.ಹುಬ್ಬಳ್ಳಿ, ಕಾರ್ಯದರ್ಶಿ ಎಸ್.ಎಸ್.ಕಾಳಪ್ಪನವರ, ಮಹಿಳಾ ಪ್ರತಿನಿಧಿ ಸಾವಿತ್ರಿ ಶಿಬಾರಗಟ್ಟಿ, ನೇತ್ರತಜ್ಞೆ ಡಾ.ಸವಿತಾ ಸಬನೀಸ, ಜೈಂಟ್ಸ್ ಗ್ರೂಪ್ ಅಧ್ಯಕ್ಷ ನಾರಾಯಣ ದನಿಯಾಳ, ಜೈಂಟ್ಸ್ ಗ್ರೂಪ್ ಆಫ್ ರೇಣುಕಾ ಸಹೇಲಿ ಅಧ್ಯಕ್ಷೆ ಪಾರ್ವತಿ ಕಾಂತಿಮಠ ಇತರರಿದ್ದರು.