ಸಾವು 
ಬೆಳಗಾವಿ

ಅಪಘಾತದಲ್ಲಿ ಮೂವರು ಯುವಕರ ಸಾವು

ಧರ್ಮರಾಜ ರಾಮನಗೌಡ ಪಾಟೀಲ
ಬೆಳಗಾವಿ: ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ ಬಳಿ ಅಥಣಿ-ಗೋಕಾಕ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿರುವ ಘಟನೆ ಸೋಮವಾರ ಸಂಭವಿಸಿದೆ.
ರಾಯಬಾಗ ತಾಲೂಕಿನ ಮೊರಬದ ಗ್ರಾಮದ ಗಜಾನನ ವಡೆಯರ್ (22), ಮುಗಳಖೋಡದ ಮಲ್ಲಪ್ಪ ಗೋಲಭಾಂವಿ (22), ಮಹಾದೇವ ಗೋಲಭಾಂವಿ (22) ಮೃತರು.
ಫೆ.2ರಂದು ಮುಗಳಖೋಡ ಕಡೆಯಿಂದ ಹಾರೂಗೇರಿ ಕಡೆಗೆ ಒಂದೇ ಬೈಕ್ ಮೇಲೆ ಮೂವರೂ ಹೋಗುತ್ತಿದ್ದ ಸಂದರ್ಭದಲ್ಲಿ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹಾರೂಗೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.