ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನಾಭರಣದೊಂದಿಗೆ ಬೆಳಗಾವಿ ಮಾರ್ಕೆಟ್ ಠಾಣೆ ಪಿಐ ಜೆ.ಎಂ.ಕಾಲಿಮಿರ್ಚಿ, ಪಿಎಸ್‌ಐ ಹುಸೇನ್ ಕೆರೂರ, ಎಎಸ್‌ಐಗಳಾದ ವಿಠ್ಠಲ ಎಲ್., ಎಸ್.ಎಂ. ಶಿಂಧೆ ಇತರರಿದ್ದಾರೆ.
ಬೆಳಗಾವಿ: ಪ್ರತ್ಯೇಕ ಪ್ರಕರಣಗಳಲ್ಲಿ ಕಮಿಷ್ನರೇಟ್ ವ್ಯಾಪ್ತಿಯ ಎರಡು ಠಾಣೆಗಳ ಪೊಲೀಸರು ಮಹಿಳೆ ಸೇರಿದಂತೆ ಮೂವರು ಕಳ್ಳರನ್ನು ಬಂಸಿ, 13.86 ಲಕ್ಷ ರೂ.ವೌಲ್ಯದ ಚಿನ್ನಾಭರಣ, ಕಾರು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಾರ್ಕೆಟ್ ಠಾಣೆ ಪೊಲೀಸರು, ಖಾಸಬಾಗ ಉಪ್ಪಾರಗಲ್ಲಿಯ ಸುರೇಖಾ ಬಸವರಾಜ ತಳವಾರ (40)ನ್ನು ಬಂಸಿ 9,27,990 ರೂ. ವೌಲ್ಯದ 68.74 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಶಿವಾಜಿ ನಗರ 1ನೇ ಕ್ರಾಸ್‌ನ ಲಲಿತಾ ಮಮದಾಪುರ ಅವರ ಮನೆಯಲ್ಲಿ ಕಳವಾದ ಬಗ್ಗೆ ಮಾ.9ರಂದು ದೂರು ದಾಖಲಾಗಿತ್ತು. ಈ ತನಿಖೆಯಲ್ಲಿ ಸುರೇಖಾ ಸಿಕ್ಕಿಬಿದ್ದಿದ್ದು, ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಬಾಗದಲ್ಲಿ ವಿಜಯ ಅಂದಾನಿ ಅವರ ಮನೆಯ ಕಳ್ಳತನ ಪ್ರಕರಣದ ತನಿಖೆಯಲ್ಲಿ ಉದ್ಯಮಬಾಗ ಪೊಲೀಸರು ಬೈಲಹೊಂಗಲ ತಾಲೂಕು ಮೊಹರೆ ಗ್ರಾಮದ ರಾಮಚಂದ್ರ ತಳವಾರ (21), ಗೋಕಾಕ ತಾಲೂಕಿನ ರಾಜನಕಟ್ಟಿಯ ಸುರೇಶ ಪಾಟೀಲ(33)ನನ್ನು ಬಂಸಿದ್ದಾರೆ. ವಿಚಾರಣೆ ವೇಳೆ ಉದ್ಯಮಬಾಗ ಜತೆಗೆ ಮುರಗೋಡ ಠಾಣೆ ವ್ಯಾಪ್ತಿಯಲ್ಲೂ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಬಂತರಿಂದ 10 ಸಾವಿರ ರೂ.ವೌಲ್ಯದ 0.300 ಗ್ರಾಂ ಚಿನ್ನದುಂಗುರ, 60 ಸಾವಿರ ರೂ. ನಗದು, 2 ಲಕ್ಷ ರೂ. ವೌಲ್ಯದ ಕಾರು, 1.80 ಲಕ್ಷ ರೂ. ವೌಲ್ಯದ ಎರಡು ಬೈಕ್, 9 ಸಾವಿರ ರೂ. ವೌಲ್ಯದ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.