Three new train services launched 
ಬೆಳಗಾವಿ

ಮೂರು ಹೊಸ ರೈಲು ಸೇವೆ ಆರಂಭ

ವಿಠ್ಠಲ ಹಣಮಂತ ಬಾಳೇಕುಂದ್ರಿ
ಬೆಳಗಾವಿ: ನೈಋತ್ಯ ರೈಲ್ವೆಯು ಹೈದರಾಬಾದ್​, ಸಿಕಂದರಾಬಾದ್​ ಮತ್ತು ಚರ್ಲಪಲ್ಲಿಗೆ ಬೆಳಗಾವಿಯಿಂದ ಮೂರು ಹೊಸ ಸಾಪ್ತಾಹಿಕ ಎಕ್ಸ್​ಪ್ರೆಸ್​ ರೈಲು ಸೇವೆ ಅರಂಭಿಸುತ್ತಿದೆ.
ಮೇ 15ರಿಂದ ಆರಂಭಗೊಳ್ಳುವ ಬೆಳಗಾವಿ&ಹೈದರಾಬಾದ್​ ರೈಲು ಪ್ರತಿ ಶುಕ್ರವಾರ ಬೆಳಗಾವಿಯಿಂದ ಮಧ್ಯಾಹ್ನ 1ಕ್ಕೆ ಹೊರಟು ಮರುದಿನ ಬೆಳಗ್ಗೆ 7ಕ್ಕೆ ಹೈದರಾಬಾದ್​ ತಲುಪಲಿದೆ. ಮೇ 21ರಿಂದ ಹೈದರಾಬಾದ್​&ಬೆಳಗಾವಿ ರೈಲು ಪ್ರತಿ ಗುರುವಾರ ಹೈದರಾಬಾದ್​ನಿಂದ ಸಂಜೆ 4.30ಕ್ಕೆ ಹೈದರಾಬಾದ್​ನಿಂದ ಹೊರಟು, ಮರುದಿನ 10.30ಕ್ಕೆ ಬೆಳಗಾವಿ ತಲುಪಲಿದೆ.
ಮೇ 18ರಿಂದ ಸಿಕಂದರಾಬಾದ್​&ಬೆಳಗಾವಿ ಸಾಪ್ತಾಹಿಕ ಎಕ್ಸ್​ಪ್ರೆಸ್​ ಪ್ರತಿ ಸೋಮವಾರ ಸಿಕಂದರಾಬಾದ್​ನಿಂದ ಸಂಜೆ 4.30ಕ್ಕೆ ಹೊರಟು ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿ ಬರುವುದು. ಹಿಂತಿರುಗುವ ಮಾರ್ಗದಲ್ಲಿ ಮೇ 19ರಿಂದ ಪ್ರತಿ ಮಂಗಳವಾರ ಮಧ್ಯಾಹ್ನ 1ಕ್ಕೆ ಬೆಳಗಾವಿ ಬಿಟ್ಟು, ಮರುದಿನ ಬೆಳಗ್ಗೆ 7.15ಕ್ಕೆ ಸಿಕಂದರಾಬಾದ್​ ತಲುಪಲಿದೆ.
ಮೇ 16ರಿಂದ ಆರಂಭಗೊಳ್ಳುವ ಬೆಳಗಾವಿ&ಚರ್ಲಪಲ್ಲಿ ರೈಲು ಪ್ರತಿ ಶನಿವಾರ ಸಂಜೆ 4ಕ್ಕೆ ಚರ್ಲಪಲ್ಲಿಯಿಂದ ಹೊರಟು ಭಾನುವಾರ ಬೆಳಗ್ಗೆ 10.30ಕ್ಕೆ ಬೆಳಗಾವಿ ತಲುಪಿ, ಅದೇ ದಿನ ಮಧ್ಯಾಹ್ನ 1ಕ್ಕೆ ಬೆಳಗಾವಿಯಿಂದ ಹೊರಟು ಸೋಮವಾರ ಬೆಳಗ್ಗೆ 8.45ಕ್ಕೆ ಚರ್ಲಪಲ್ಲಿ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.