Three arrested for playing Matka
ಬೆಳಗಾವಿ: ನಗರದಲ್ಲಿನ ಎರಡು ಪ್ರತ್ಯೇಕ ಮಟ್ಕಾ ದಾಳಿ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ನಗರ ಪೊಲೀಸರು ಗುರುವಾರ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ದೇಶಪಾಂಡೆ ಗಲ್ಲಿಯಲ್ಲಿ ಮಟ್ಕಾ ಆಟದಲ್ಲಿ ತೊಡಗಿದ್ದ ಮಂಜುನಾಥ ತಿಗಡಿ ( 40) ಮಾರ್ಕೇಟ್ ಠಾಣೆ ಪೊಲೀಸರು, ಮಣ್ಣೂರಿನ ಡೈಯಟ್ ಕಾಲೇಜಿನ ಹತ್ತಿರ ಮಟ್ಕಾದಲ್ಲಿ ತೊಡಗಿದ್ದ ಬಜರಂಗ ಕದಮ (40), ಅಜಿತ ದೋನಕರಿಯನ್ನು ಕಾಕತಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.