ಕಳ್ಳತನವಾದ ಕಾರ ಪತ್ತೆ 
ಬೆಳಗಾವಿ

ಕಾರ ಕಳ್ಳತನ ಪ್ರಕರಣ: ಆರೋಪಿಗಳು ಪರಾರಿ

ಪ್ರಮುಖ ಮುಖ್ಯಾಂಶಗಳು

  • ಕಳ್ಳತನವಾದ ಕಾರ ಪತ್ತೆ ಹಚ್ಚಿದ ಪೊಲೀಸರು
  • ಬೆಳಗಾವಿ ನಗರದಲ್ಲಿ ನಡೆದಿದ್ದ ಕಳ್ಳತನ
  • ಮುಂಬೈಯಲ್ಲಿ ಪತ್ತೆಯಾದ ಕಾರ
ಕಾರ ಕಳ್ಳತನ ಪ್ರಕರಣ:ಆರೋಪಿಗಳು ಪರಾರಿ
ಬೆಳಗಾವಿ : ನಗರದ ಹನುಮಾನ ನಗರದಲ್ಲಿ ನಡೆದಿದ್ದ ಕಾರ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕಾರ ಕಳ್ಳತನವಾಗಿ 24 ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದೆ.
ಕಾರು ಮಾಲಿಕ ಪ್ರಿಯಾಂಕಾ ಅಜರೇಕರ ನೀಡಿದ ದೂರಿನ ಮೇರೆಗೆ ಮಹಾರಾಷ್ಟ್ರ ಮುಂಬೈನಲ್ಲಿ ಕಳ್ಳತನವಾದ ಕಾರ ಪತ್ತೆ ಹಚ್ಚಲಾಗಿದೆ..ಈ ವೇಳೆ ಕಾರು ಕಳ್ಳತನ ಮಾಡಿದ್ದ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದು, ,ಆರೋಪಿತರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಕಳ್ಳರು ಕಳ್ಳತನ ಮಾಡಿದ್ದ ಕಿಯಾ ಸೆಲ್ಟೋಸ್ ಮತ್ತು ಧಾರವಾಡ ಸಬ್ ಅರ್ಬನ್ ಪೊಲೀಸ್ ಠಾಣೆ ಕಳ್ಳತನ ಮಾಡಲಾಗಿತ್ತು ಹುಂಡೈ ಕ್ರೇಟಾ ಕಾರು ಪೊಲೀಸರ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.