ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಅಮೃತಕ್ಕ ಮುನವಳ್ಳಿ, ಅನಸೂಯಾ ಧೂಳಾಯಿ, ವಿದ್ಯಾ ಮಗದುಮ್ಮ, ರಾಜೇಶ್ವರಿ ಕಲ್ಲೋಳ್ಳಿ ಇತರರಿದ್ದರು.
ಹಿರಿಯ ನಾಗರಿಕರ ಅನುಭವ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ ಎಂದು ಅಮೃತಕ್ಕ ಮುನವಳ್ಳಿ ಹೇಳಿದರು.
ನಗರದ ರೋಟರಿ ರಕ್ತ ಭಂಡಾರ ಸಭಾಭವನದಲ್ಲಿ ಇನ್ನರ್‌ವೀಲ್ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿರಿಯರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಡೆದರೆ ನೆಮ್ಮದಿಯ ಬದುಕು
ನಮ್ಮದಾಗುತ್ತದೆ. ಅಧ್ಯಾತ್ಮ ಅಳವಡಿಸಿಕೊಂಡು, ಸತ್ಸಂಗದಲ್ಲಿ ಪಾಲ್ಗೊಂಡು ಮಹಾತ್ಮರ ನುಡಿಗಳನ್ನು ಅನುಸರಿಸಬೇಕು. ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ಎಂದರು.
ಇನ್ನರ್‌ವೀಲ್ ಸಂಸ್ಥೆಯ ಅಧ್ಯಕ್ಷೆ ಅನಸೂಯಾ ಧೂಳಾಯಿ, ಕಾರ್ಯದರ್ಶಿ ವಿದ್ಯಾ ಮಗದುಮ್ಮ, ಖಜಾಂಚಿ ರಾಜೇಶ್ವರಿ ಕಲ್ಲೋಳ್ಳಿ ಇತರರಿದ್ದರು.