ದಡ್ಡಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬಿಡಿಸಿಸಿ ನಿರ್ದೇಶಕ ರಾಹುಲ ಜಾರಕಿಹೊಳಿ ಚಾಲನೆ ನೀಡಿದರು. ದಯಾನಂದ ಪಾಟೀಲ, ಬಸವರಾಜ ದೇಸಾಯಿ, ಈರಣ್ಣ ದೇಸಾಯಿ, ಸುರೇಶ ಬೆಣ್ಣಿ, ಭರಮಾ ಹಳ್ಳೂರಿ ಇತರರಿದ್ದರು.
ದಡ್ಡಿ: ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ ಹೇಳಿದರು.
ಗ್ರಾಮದಲ್ಲಿ ಶುಕ್ರವಾರ ಜಿಪಂ ವ್ಯಾಪ್ತಿಯಲ್ಲಿ 1.34 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ನರಸಿಂಗಪುರ, ನಾಗನೂರು ಕೆ.ಎಂ.ಮನಗುತ್ತಿ, ದಡ್ಡಿ, ಮಜತಿ, ವಾಡಿಶಿದ್ಲಿಹಾಳ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು. ದಯಾನಂದ ಪಾಟೀಲ, ಬಸವರಾಜ ದೇಸಾಯಿ, ಈರಣ್ಣ ದೇಸಾಯಿ, ಸುರೇಶ ಬೆಣ್ಣಿ, ಭರಮಾ ಹಳ್ಳೂರಿ, ವಿರೂಪಾಕ್ಷ ಚೌಗಲಾ, ಮಹಾನಿಂಗ ಶಿರಗುಪ್ಪಿ ಇತರರಿದ್ದರು.