ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಸಿ.ಹೂಗಾರ ಸನ್ಮಾನ ಕಾರ್ಯಕ್ರಮದಲ್ಲಿ ಚಿಂಚಣಿ ಸಿದ್ಧ ಸಂಸ್ಥಾನ ಮಠದ ಶಿವಪ್ರಸಾದ ದೇವರು ಮಾತನಾಡಿದರು. ಪರಸಗೌಡ ಪಾಟೀಲ, ಆನಂದಮೂರ್ತಿ ಕುಲಕರ್ಣಿ, ಬಾಬಾಸಾಹೇಬ ಪಾಟೀಲ ಇತರರಿದ್ದರು.
ಕಾಗವಾಡ: ಶಿಕ್ಷಕರಾದವರು ಸೇವೆಯಿಂದ ನಿವೃತ್ತರಾದರೂ ಅವರ ಜ್ಞಾನಾರ್ಜನೆ ಎಂದಿಗೂ ಕೊನೆಗೊಳ್ಳಲಾರದು ಎಂದು ಚಿಂಚಣಿ ಸಿದ್ಧ ಸಂಸ್ಥಾನ ಮಠದ ಶಿವಪ್ರಸಾದ ದೇವರು ಹೇಳಿದರು.
ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಈಚೆಗೆ ನಿವೃತ್ತರಾದ ಮುಖ್ಯಶಿಕ್ಷಕ ಎಂ.ಸಿ.ಹೂಗಾರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಎಂ.ಸಿ.ಹೂಗಾರ ಕೆಎಸ್‌ಎಸ್ ಸಂಸ್ಥೆಗೆ ೧ ಲಕ್ಷ ರೂ. ದೇಣಿಗೆ ನೀಡಿದರು.
ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಪರಸಗೌಡ (ಅಣ್ಣಾಸಾಬ) ಪಾಟೀಲ, ಸಿಎಲ್‌ಇ ಶಿಕ್ಷಣ ಮಹಾವಿದ್ಯಾಲಯದ ಆಡಳಿತಾತ್ಮಕ ಸಲಹೆಗಾರ ಆನಂದಮೂರ್ತಿ ಕುಲಕರ್ಣಿ, ಸಂಸ್ಥೆ ಸಂಸ್ಥಾಪಕ ಸದಸ್ಯ ಬಾಬಾಸಾಹೇಬ ಪಾಟೀಲ, ಅಧ್ಯಕ್ಷ ವಿಲಾಸ ಕಡೋಲೆ, ಮುಖಂಡರಾದ ಅನಿಲ ಕಡೋಲೆ, ಬಸವರಾಜ ನಂದಾಳೆ, ವಿಜಯ ಪಾಟೀಲ, ರಾಜು ಕಡೋಲೆ, ಮಲಗೌಡ ಪಾಟೀಲ, ತಾತ್ಯಾಸಾಬ ಪಾಟೀಲ, ಆರ್.ಬಿ.ಪಾಟೀಲ, ಎಸ್.ಎಸ್.ಪಾಟೀಲ, ಎ.ಎಸ್.ಮರೆಗುದ್ದಿ, ಎ.ಕೆ.ವಾಂಟೆ, ವಿ.ವಿ.ಲಿಂಬಾವಳಿ ಇತರರಿದ್ದರು.