ಉಗರಗೋಳದಲ್ಲಿ ಲದೀಪೋತ್ಸವಕ್ಕೆ ಶಾಸಕ ವಿಶ್ವಾಸ ವೆದ್ಯ ಚಾಲನೆ ನೀಡಿದರು. ವಿರೂಪಾ ಮಾಮನಿ, ಎಂ.ಆರ್.ಹಿರೇಮಠ, ಮಹಾಂತ ಶ್ರೀಗಳು ಇತರರಿದ್ದರು.
ಯುವಕರು ಅಧ್ಯಯನಕ್ಕೆ ಆದ್ಯತೆ ನೀಡಲಿ
ಉಗರಗೋಳ: ಜಂಗಮ ಸಮುದಾಯದ ಮಕ್ಕಳಿಗಾಗಿ ಸಂಸತ ಪಾಠಶಾಲೆ ತೆರೆದು ಉಚಿತವಾಗಿ ಶಿಣ ನೀಡುತ್ತಿರುವ ವಿಶೇಷ ನಿವತ್ತ ಜಿಲ್ಲಾಧಿಕಾರಿ ಎಂ.ಆರ್.ಹಿರೇಮಠ ಕಾರ್ಯ ಶ್ಲಾನೀಯ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಗ್ರಾಮದ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಉದ್ಘಾಟಿಸಿ ಮಾತನಾಡಿ, ಸುಸಂಸತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಠ ಹಾಗೂ ಸಂಸತ ಪಾಠಶಾಲೆಗೆ ಸಹಕಾರ ನೀಡುತ್ತೇನೆ ಎಂದರು.
ಬಿಜೆಪಿ ಮುಖಂಡ ವಿರೂಪಾ ಮಾಮನಿ ಮಾತನಾಡಿ, ನಿವತ್ತ ಜೀವನವನ್ನು ಜಂಗಮ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಿರೇಮಠ ಅವರ ಸೇವೆ ಪ್ರಶಂಸನೀಯ ಎಂದರು
ಉಪನ್ಯಾಸಕ ಉಮೇಶ ನರಗುಂದ ಮಾತನಾಡಿ, ಯುವಜನರು ಅಧ್ಯಯನಕ್ಕೆ ಆದ್ಯತೆ ಕೊಡಬೇಕು. ಮಹಾತ್ಮರ ಸಂದೇಶ ಅರಿತು ನಿಸ್ವಾರ್ಥ ಬದುಕು ಕಟ್ಟಿಕೊಳ್ಳಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿಶೇಷ ನಿವತ್ತ ಜಿಲ್ಲಾಧಿಕಾರಿ ಎಂ.ಆರ್.ಹಿರೇಮಠ, ನಿರ್ವಾಣೇಶ್ವರ ಮಠದ ಮಹಾಂತ ಶ್ರೀಗಳು, ರಾಮಾರೂಢ ಮಠದ ಬ್ರಹ್ಮಾರೂಢ ಶ್ರೀಗಳು, ಜಗದೀಶ ಕೌಜಗೇರಿ, ಸಿದ್ದನಗೌಡ ಗೂಡರಾಶಿ, ಅಲ್ಲಮಪ್ರಭು ಪ್ರಭುನವರ, ಪುಂಡಲೀಕ ಬಾಳೋಜಿ, ಮಂಜುನಾಥಯ್ಯ ಕಂಬಿ, ಗುರುಸಿದ್ದಯ್ಯ ಹಿರೇಮಠ, ಉಮೇಶ ನರಗುಂದ, ಶರಣಗೌಡ ಪಾಟೀಲ, ಏಕನಗೌಡ ತಿಪರಾಶಿ, ಚಂದ್ರಣ್ಣ ಶ್ಯಾಮರಾಯನವರ, ದೇವರಡ್ಡಿ ಬಿಜಗುಪ್ಪಿ, ಮಂಜುನಾಥ ಯಕ್ಕುಂಡಿ, ಧರ್ಮಪ್ಪ ಚಂದರಗಿ, ಜಗದೀಶ ಬೂದಣ್ಣವರ, ಆನಂದ ಭೋವಿ, ಮುತ್ತಯ್ಯ ತೋರಗಲ್ಲಮಠ ಇತರರಿದ್ದರು.