Theft 
ಬೆಳಗಾವಿ

ಸೌಗಂಧಿಪುರ ಸಾಯಿ ಮಂದಿರದಲ್ಲಿ ಕಳವು

ಸವದತ್ತಿ: ನಗರದ ಸೌಗಂಧಿಪುರದಲ್ಲಿರುವ ಸಾಯಿ ಮಂದಿರದಲ್ಲಿ ಇತ್ತೀಚೆಗೆ ಕಳವು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ ಸುಮಾರು 1.30ರ ವೇಳೆಗೆ ಇಬ್ಬರು ಮುಸುಕುಧಾರಿಗಳು ದೇವಸ್ಥಾನದ ಬಲಭಾಗದ ಕಿಟಕಿಯನ್ನು ಕತ್ತರಿಸಿ ಒಳನುಗ್ಗಿ ಕಾಣಿಕೆ ಪೆಟ್ಟಿಗೆ ಹಾಗೂ 1,600 ಗ್ರಾಂ ತೂಕದ ಬೆಳ್ಳಿ ಪಾದುಕೆಗಳನ್ನು ಹೊತ್ತೊಯ್ದಿದ್ದಾರೆ.
ಬಾಬಾ ಮೇಲಿದ್ದ ಛತ್ರಿಯನ್ನು ಕೂಡ ಕಿಟಕಿ ಮೂಲಕ ಹೊರಗೆ ತೆಗೆದಿದ್ದರೂ, ಅದು ಬೆಳ್ಳಿಯಲ್ಲವೆಂದು ತಿಳಿದು ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಕುರಿತು ಅರ್ಚಕ ಬಂಗಾರಯ್ಯ ಹಿರೇಮಠ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.