ಪೌರಾಣಿಕ ನಾಟಕ ಪ್ರದರ್ಶನ 
ಬೆಳಗಾವಿ

ರಂಗಭೂಮಿಗೆ ಬೇಕು ನೆರವು

ಶಂಕರ ಗೆಜ್ಜಿ
ಬೆಳಗಾವಿ: ಗ್ರಾಮೀಣ ಭಾಗದ ಕಲೆ, ಸಂಗೀತ, ನೃತ್ಯ ಮತ್ತು ಪೌರಾಣಿಕ ಕಥೆಗಳನ್ನು ಉಳಿಸಿಕೊಂಡು ಬಂದಿರುವ ಬಯಲಾಟ, ಸಾಮಾಜಿಕ, ಪೌರಾಣಿಕ, ರೌದ್ರಮಯ ನಾಟಕ ಕಲಾವಿದರಿಗೆ ಸರ್ಕಾರದ ನೆರವಿನ ಹಸ್ತ ಬೇಕಿದೆ.!
ಜಿಲ್ಲೆಯಲ್ಲಿರುವ 8 ಸಾವಿರಕ್ಕೂ ಅಕ ಕಲಾವಿದರು ವೃತ್ತಿ ರಂಗಭೂಮಿ ನಂಬಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದಲ್ಲಿರುವ ಬಹುತೇಕ ಕಲಾವಿದರಿಗೆ ಸರ್ಕಾರ, ಅಕಾಡೆಮಿಯಿಂದ ಸವಲತ್ತು ಸಿಗುತ್ತಿಲ್ಲ. ರಂಗಮಂದಿರ, ತಾಲೀಮು ಕೇಂದ್ರಗಳು ಇಲ್ಲದೆ ಸರ್ಕಾರಿ ಶಾಲೆ, ಅಂಗಡಿ, ದೇವಸ್ಥಾನ ಆವರಣದಲ್ಲಿ ನಾಟಕ, ಬಯಲಾಟ ಕಲಿಯುವ ಸ್ಥಿತಿ ಇದೆ.
ಗ್ರಾಮೀಣ ಭಾಗದಲ್ಲಿ ಪ್ರತಿ ವರ್ಷ ಜಾತ್ರೆ, ಉತ್ಸವ ಸಂದರ್ಭದಲ್ಲಿ ನಾಟ್ಯ ಸಂಘಗಳು, ಶ್ರೀಕೃಷ್ಣ ಪಾರಿಜಾತ, ವಿವಿಧ ನಾಟಕ ಕಂಪನಿಗಳು ನಾಟಕ ಏರ್ಪಡಿಸುತ್ತವೆ. ಸಂಗೀತ ಮತ್ತು ನೃತ್ಯ ಅಭಿನಯದ ಅವಿಭಾಜ್ಯ ಅಂಗವಾಗಿದೆ. ರಾಮಾಯಣ, ಮಹಾಭಾರತದ ಪ್ರಸಂಗಗಳು ಮತ್ತು ಸ್ಥಳೀಯ ದೈವಗಳ ಕಥೆಗಳನ್ನು ಕಲಾವಿದರು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ಆದರೆ, ಆರ್ಥಿಕ ಮುಗ್ಗಟ್ಟು, ಪ್ರೇಕ್ಷಕರ ಅಭಿರುಚಿ, ಪ್ರೋತ್ಸಾಹದ ಕೊರತೆ ಹೀಗೆ ವಿವಿಧ ಕಾರಣಗಳಿಂದ ವೃತ್ತಿ ರಂಗಭೂಮಿ ಕುಂಟುತ್ತ ಸಾಗಿದೆ.
ಬೆಳ್ಳಿ ಪರದೆ, ಕಂಪ್ಯೂಟರ್, ಮೊಬೈಲ್, ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ನಾಟಕ ಮತ್ತು ಬಯಲಾಟ ಅಪರೂಪವಾಗುತ್ತಿವೆ.

ಸೌಲಭ್ಯಗಳಿಗಾಗಿ ಕಚೇರಿಗೆ ಅಲೆದಾಟ

ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ, ಮರಾಠಿ ಭಾಷಿಕ ವೃತ್ತಿ ರಂಗಭೂಮಿ ಕಲಾವಿದರು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಐದು ದಶಕದಲ್ಲಿ ಜಿಲ್ಲೆಗೆ 5 ನಾಟಕ, 10 ಬಯಲಾಟ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಬಿಟ್ಟರೆ ಬೇರೆ ಯಾವುದೇ ರೀತಿಯ ಸ್ಥಾನಮಾನ, ಆರ್ಥಿಕ ನೆರವು, ಪ್ರೋತ್ಸಾಹಧನ ದೊರೆತಿಲ್ಲ.
"

ಬೆಳಗಾವಿ ನಗರದಲ್ಲಿ ಜಾಗದ ಕೊರತೆಯಿಂದಾಗಿ ಬಯಲಾಟ, ನಾಟಕ ಕಲಾವಿದರಿಗೆ ಶಾಶ್ವತ ತಾಲೀಮು ಕೇಂದ್ರ ಆರಂಭಿಸಲು ಸಾಧ್ಯವಾಗಿಲ್ಲ. ಬೆಂಗಳೂರು ಮಾದರಿಯಲ್ಲೇ ಬೆಳಗಾವಿ ಭಾಗದಲ್ಲಿ ವರ್ಷಪೂರ್ತಿ ನಾಟಕ ಪ್ರದರ್ಶನ, ತರಬೇತಿ ಕಾರ್ಯಕ್ರಮ ನಡೆಸಲು ಅಕಾಡೆಮಿಯಿಂದ ಕ್ರಮ ಕೈಗೊಳ್ಳಲಾಗುವುದು. ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.

"ಸಾಮಾಜಿಕ, ಪೌರಾಣಿಕ, ಬಯಲಾಟ ಕಲಾವಿದರು ಹಳ್ಳಿಗಳಲ್ಲಿಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ರಂಗಮಂದಿರ, ತಾಲೀಮು ಕೇಂದ್ರದ ಸೌಲಭ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು ಭಾಗದಲ್ಲಿನ ಕಲಾವಿದರಿಗೆ ಸಿಗುವ ವೇದಿಕೆ ಬೆಳಗಾವಿ ಭಾಗದ ಕಲಾವಿದರಿಗೂ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಬೇಕು.
— ಮಲ್ಲಿಕಾರ್ಜುನ ಪರಪ್ಪನವರ ನಾಟಕ ಮಾಸ್ತರರು
| ಮಂಜುನಾಥ ಕೋಳಿಗುಡ್ಡ ಬೆಳಗಾವಿ